ಕವಲುದಾರಿ ಖ್ಯಾತಿಯ ನಟ ರಿಷಿ ಹಸೆಮಣೆ ಏರಲು ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿ ಉಳಿದಿವೆ. ವರ್ಷಗಳ ಕಾಲದ ಗೆಳೆತನ ಮತ್ತೊಂದು ಹಂತಕ್ಕೇರಲಿದೆ..ಹೌದು..ಗೆಳತಿ ಹಾಗೂ ಬರಹಗಾರ್ತಿಯೂ ಆಗಿರುವ ಸ್ವಾತಿ ಜೊತೆಗೆ ನವೆಂಬರ್ 10ರಂದು ಚೆನ್ನೈನಲ್ಲಿ ರಿಷಿ ಹಸೆಮಣೆ ಏರಲಿದ್ದಾರೆ.
ತುಂಬಾ ದಿನಗಳ ಹಿಂದೆಯೇ ರಿಷಿ ಹಾಗೂ ಸ್ವಾತಿ ಹೈದರಾಬಾದಿನಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಇದೇ ನವೆಂಬರ್ 8ರಂದು ಮೆಹೆಂದಿ ಶಾಸ್ತ್ರ, 9ರಂದು ನಿಶ್ಚಿತಾರ್ಥ ಹಾಗೂ ಸಂಗೀತ್ ಕಾರ್ಯಕ್ರಮ ನೆರವೇರಲಿದ್ದು, ನವೆಂಬರ್ 10 ರಂದು ಬೆಳಗ್ಗೆ 7.30 ಕ್ಕೆ ಚೆನ್ನೈನ ಇಂಜಂಬಾಕಂನಲ್ಲಿ ಮದುವೆ ಮುಹೂರ್ತ ನೆರವೇರಲಿದೆಯಂತೆ. ನವೆಂಬರ್ 20 ರಂದು ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಚಿತ್ರರಂಗದ ಅನೇಕ ಗಣ್ಯರು ಭಾಗಿಯಾಗುವ ನಿರೀಕ್ಷೆಯಿದೆ.