ಆನೆ ದಂತ ಕಲಾಕೃತಿಗಳನ್ನು ಅಕ್ರಮವಾಗಿ ಹೊಂದಿರುವ ಕಾರಣಕ್ಕಾಗಿ ಮಾಲಿವುಡ್ ಸೂಪರ್ ಸ್ಟಾರ್ ವಿರುದ್ಧ ಪೆರಂಬದೂರು ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ದಾಖಲಾಗಿದೆ. 2012ರಲ್ಲಿ ಈ ನಟನ ಮನೆಯಿಂದ ಆದಾಯ ತೆರಿಗೆ ಇಲಾಖೆ 4 ಆನೆಯ ದಂತವನ್ನು ವಶಪಡಿಸಿಕೊಂಡಿತ್ತು. ಇದೀಗ 7 ವರ್ಷಗಳ ನಂತರ ಅರಣ್ಯ ಇಲಾಖೆಯು, ವನ್ಯ ಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 39(3) ಅಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಸುವ ಮೂಲಕ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
© 2020 Udaya News – Powered by RajasDigital.