ಬೆಂಗಳೂರು, ಸೆ.5: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಸದ್ಯ ಹೊಸ ಟ್ರಾಫಿಕ್ ರೂಲ್ಸ್ ಜಾರಿಯಾಗಿದೆ. ಒಟ್ಟು 24 ಸಂಚಾರ ನಿಯಮದ ದಂಡ ಹೆಚ್ಚಿಸಲಾಗಿದ್ದು, ಇದರಲ್ಲಿ ಮನೆ ಮುಂದಿನ ರಸ್ತೆ, ಪಾದಾಚಾರಿ ರಸ್ತೆಯಲ್ಲಿ ಕಾರು ನಿಲ್ಲಿಸಿದರೆ ಇನ್ಮುಂದೆ ದಂಡ ಕಟ್ಟಬೇಕು. ಕಾರನ್ನು ಮನೆಯೊಳಗಡೆ ನಿಲ್ಲಿಸಬೇಕು ಎಂದು ಭಾಸ್ಕರ್ ರಾವ್ ಹೇಳಿದ್ದಾರೆ. ಇಷ್ಟೇ ಅಲ್ಲ ಶಾಲಾ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸುವಂತಿಲ್ಲ. ಶಾಲಾ ಆವರಣದಲ್ಲೇ ಬಸ್ ನಿಲ್ಲಿಸಬೇಕು. ಒಂದು ವೇಳೆ ಶಾಲಾ ಆವರಣದಲ್ಲಿ ಬಸ್ ನಿಲ್ಲಿಸಲು ಸ್ಥಳವಕಾಶವಿಲ್ಲದಿದ್ದರೆ, ಶಾಲೆಯನ್ನೇ ನಗರದಿಂದ ಹೊರಗಡೆ ನಡೆಸಲು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಪಾರ್ಕಿಂಗ್ ಮಾಫಿಯಾ ಆಗಿ ಮಾರ್ಪಟ್ಟಿದೆ. ಎಲ್ಲೆಂದರಲ್ಲಿ ವಾಹನ ಪಾರ್ಕಿ ಮಾಡಿದರೆ ಸಾರ್ವಜನಿಕರು ಸಮಸ್ಯೆ ಎದುರಿಸಬೇಕಾಗುತ್ತೆ. ಹೀಗಾಗಿ ಬಿಬಿಎಂಪಿಗೆ ಪತ್ರ ಬರೆಯಲಾಗಿದೆ. ರಸ್ತೆಯಲ್ಲಿ ಪಾರ್ಕ್ ಮಾಡಿದರೆ ದಂಡ ಕಟ್ಟಲೇಬೇಕು ಎಂದು ಭಾಸ್ಕರ್ ರಾವ್ ಹೇಳಿದ್ದಾರೆ. ನೂತನ ನಿಯಮ ಜಾರಿಯಾಗಿದೆ. ವಾಹನ ಸವಾರರು ನಿಯಮ ಉಲ್ಲಂಘಿಸಿದಂತೆ ಎಚ್ಚರವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.