ಮಂಡ್ಯ ಸಂಸದೆ ಸುಮಲತಾ ಸದ್ಯ ನೆಟ್ಟಿಗರ ಕೋಪಕ್ಕೆ ಗುರಿಯಾಗಿದ್ದಾರೆ..ಆಗಿರೋದೇನು ಗೊತ್ತಾ..? 2016ರಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಖ್ಯಾತ ನಟ ಚಿರಂಜೀವಿ ಅವರ ಪುತ್ರಿ ಶ್ರೀಜಾ ವಿವಾಹ ಅದ್ಧೂರಿಯಾಗಿನಡೆದಿದ್ದು, ಈ ವೇಳೆ ಸುಮಲತಾರವರು, ನಟ ಚಿರಂಜೀವಿ ಜೊತೆಗೆ ಹೆಜ್ಜೆ ಹಾಕಿರುವ ವಿಡಿಯೋವೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ನೋಡಿರುವ ನೆಟ್ಟಿಗರು ಹಾಗೂ ಸುಮಲತಾ ಅವರ ವಿರೋಧಿ ಬಣ, ಇದರ ದುರುಪಯೋಗವನ್ನು ಮಾಡಿದ್ದಾರೆ.. ರಾಜ್ಯದಲ್ಲಿ ಪ್ರವಾಹ ಸ್ಥಿತಿ ಉಂಟಾಗಿ ಜನ ತುತ್ತಿನ ಅನ್ನಕ್ಕೆ ಕಷ್ಟಪಡುತ್ತಿದ್ದಾರೆ..ವಾಸಕ್ಕೆ ಸೂರಿಲ್ಲದೆ ದಿಕ್ಕೇ ತೋಚದಾಗಿದ್ದಾರೆ. ಇಂತಹ ವೇಳೆ ಮಂಡ್ಯ ಸಂಸದೆ ಮಾತ್ರ ಮೋಜು ಮಸ್ತಿ ಮಡ್ತಿದ್ದಾರೆ.. ಜವಾಬ್ದಾರಿ ಮರೆತಿದ್ದಾರೆ ಅಂತೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಸುಮಲತಾ ಅಂಬರೀಶ್ ವಿರುದ್ಧ ಕಿಡಿಕಾರಿದ್ದಾರೆ. ಇದಕ್ಕೆ ಸುಮಲತಾ ಅಂಬರೀಶ್ ಅಭಿಮಾನಿಗಳ ಹಾಗೂ ಅಂಬಿ ಅಭಿಮಾನಿ ಬಳಗ ಕೋಪಗೊಂಡಿದ್ದಾರೆ. ತಪ್ಪು ಮಾಹಿತಿ ರವಾನೆಯಾಗ್ತಿರುವ ನಿಟ್ಟಿನಲ್ಲಿ ಸುಮಲತಾ ಅವರು ಸದ್ಯ ಸೈಬರ್ ಕ್ರೈಂ ಪೊಲೀಶರಿಗೆ ದೂರು ನೀಡಿದ್ದಾರೆ.
© 2020 Udaya News – Powered by RajasDigital.