ರಾಜ್ಯಸಭೆ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕೆ.ಸಿ ರಾಮಮೂರ್ತಿ ಅವರು ಇಂದು ವಿಧಾನಸಭೆಯ ಕಾರ್ಯದರ್ಶಿಗಳಿಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವರಾದ ಡಿ.ವಿ. ಸದಾನಂದಗೌಡ, ಸಂಸದರಾದ ರಾಜೀವ್ ಚಂದ್ರಶೇಖರ್ ಅವರು, ಕಂದಾಯ ಸಚಿವರಾದ ಆರ್ ಅಶೋಕ್, ಪ್ರಭಾಕರ್ ಕೋರೆಯವರು ಸಂಸದೆ ಕುಮಾರಿ. ಶೋಭಾ ಕರಂದ್ಲಾಜೆ ಅವರು ಉಪಸ್ಥಿತರಿದ್ದರು.
ಈ ವೇಳೆ ಮಾಧ್ಯಮಗಳು ಕೇಳಿರುವ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ರಾಜ್ಯಸಭಾ ಅಭ್ಯರ್ಥಿ ಕೆ.ಸಿ.ರಾಮಮೂರ್ತಿ, ಐಟಿ ಭಯಕ್ಕೆ ನಾನು ಹೆದರಿ ಬಿಜೆಪಿಗೆ ಹೋಗಿಲ್ಲ,ನನ್ನ ಆತ್ಮಸಾಕ್ಷಿಗಾಗಿ ನಾನು ಬಿಜೆಪಿ ಸೇರಿದ್ದೇನೆ ಪದೇ ಪದೇ ಐಟಿ ದಾಳಿ ಬಗ್ಗೆ ಕೇಳಬೇಡಿ ಎಂಬುದಾಗಿ ಹೇಳಿದ್ದಾರೆ.
ಮೋದಿಯವರ ಅಭಿವೃದ್ಧಿ ಕಾರ್ಯ ನೋಡಿ ರಾಮಮೂರ್ತಿ ಕಾಂಗ್ರೆಸ್ ಗೆ ರಾಜೀನಾಮೆ ಕೊಟ್ರು.ಈಗ ಬಿಜೆಪಿಯಿಂದ ರಾಜ್ಯಸಭೆಗೆ ಸ್ಪರ್ಧಿಸುತ್ತಿದ್ದು, ಅಭೂತಪೂರ್ವವಾಗಿ ಗೆಲುವು ಸಾಧಿಸುತ್ತಾರೆ ಎಂಬುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ರಾಮಮೂರ್ತಿ ನಮ್ಮ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ. ಅವರಿಗೆ ಯಾವುದೇ ಸವಾಲು ಇಲ್ಲ,ಯಾವುದೇ ಚುನಾವಣೆಯಿಲ್ಲದೆ ಅವರು ಜಯಿಸುತ್ತಾರೆ. ರಾಜ್ಯಸಭೆಯಿಂದ ಬಿಲ್ ಪಾಸ್ ಗೆ ಹಿನ್ನಡೆಯಾಗುತ್ತಿತ್ತು.ಈಗ ನಮ್ಮ ಸದಸ್ಯರು ಹೆಚ್ಚಾಗುವುದರಿಂದ ಲಾಭವಾಗಲಿದೆ ಎಂಬುದು ಸಂಸದೆ ಶೋಭಾ ಕರಂದ್ಲಾಜೆ ಮಾತು.