ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 7 ಎಂಡ್ ಆಗಿದೆ.. ಈ ಬಾರಿಯ ಬಿಗ್‍ಬಾಸ್ ಟ್ರೋಫಿ ಕುಂದಾಪುರದ ಕುವರ ನಟ ಶೈನ್‍ಶೆಟ್ಟಿ ಮುಡಿಗೆ ಬಂದಿದೆ..ರನ್ನರ್‍ಅಪ್ ಸ್ಥಾನ ನಟ ಕುರಿ ಪ್ರತಾಪ್ ಪಡೆದುಕೊಂಡಿದ್ದಾರೆ 3 ನೇ ಸ್ಥಾನವನ್ನು ವಾಸುಕಿ ವೈಭವ್ ಅಲಂಕರಿಸಿದ್ದು ನಾಲ್ಕನೆ ಹಾಗೂ 5 ನೇ ಸ್ಥಾವನ್ನು ದೀಪಿಕಾ ದಾಸ್ ಹಾಗೂ ಭುಮಿ ಶೆಟ್ಟಿ ಪಡೆದುಕೊಂಡ್ಡಿದ್ದಾರೆ.
ಪ್ರತಿವರ್ಷ ಬಿಗ್‍ಬಾಸ್ ವಿನ್ನರ್ ಘೋಷಣೆಯಾಗುತ್ತಿದ್ದಂತೆ ಹಲವಾರು ಟೀಕಾಪ್ರಹಾರಗಳೇ ಬರುತ್ತಿದ್ದವು ಆದ್ರೆ ಈ ಬಾರಿ ಮಾತ್ರ ಶೈನಿ ಶೆಟ್ಟಿ ಆಯ್ಕೆನೇ ಸರಿ ಅನ್ನೋದು ಎಲ್ಲರ ಅಭಿಪ್ರಾಯ.ಒಂದ್ಕಾಲದಲ್ಲಿ ಸೀರಿಯಲ್‍ನಲ್ಲಿ ನಟಿಸಿ ನಂತರ ಸಿನಿಮಾ ಕ್ಷೇತ್ರಕ್ಕೆ ಹಾರಿದ ಇವರು ಯಾವುದೇ ಚಾನ್ಸ್‍ಗಳಿಲ್ಲದೆ ಮೂಲೆಗುಂಪಾಗಿದ್ದು ; ಜೀವನ ಸಾಗಿಸೋದಕ್ಕಾಗಿ ಸ್ಟ್ರೀಟ್‍ಫುಡ್ ಸ್ಟಾಲ್ ಹಾಕಿ ಬದುಕು ಸಾಗಿಸುತ್ತಿದ್ದರು. ಅವರನ್ನು ಗುರುತಿಸಿದ ಬಿಗ್‍ಬಾಸ್ ಟೀಂ ಮತ್ತೆ ಅವರನ್ನು ಇಂಡಸ್ಟ್ರಿಗೆ ತಂದಿದೆ.. ಕಷ್ಟದಲ್ಲಿ ಮುಂದೆ ಬಂದಿರೋ ಶೈನ್ ಶೆಟ್ಟಿ ಬಿಗ್‍ಬಾಸ್ ಗೆದ್ದಿರೋದು ಸರಿ ಅನ್ನೋದು ಪ್ರತಿಯೊಬ್ಬರ ಮಾತು.. ಇನ್ನು ಈ ಬಾರಿ ವಿನ್ನರಿಗೆ ಆಕರ್ಷಕ ಬಹುಮಾನಗಳನ್ನು ಆಯೋಜಕರು ನೀಡಿದ್ದಾರೆ .
ಶೈನಿ ಶೆಟ್ಟಿಗೆ 50 ಲಕ್ಷ ಹಾಗೂ ಬಿಗ್‍ಬಾಸ್ ಕಪ್ ಸಿಕ್ಕಿದ್ರೆ, ಹಲವಾರು ಪ್ರಾಯೋಜಕರುಗಳಿಂದ 11 ಲಕ್ಷ ದೊರಕಿದೆ . ಜೊತೆಗೆ ಒಂದು ಕಾರ್ ಗಿಫ್ಟ್ ಆಗಿಬಂದಿದೆ. ಅದೇ ರೀತಿ ರನ್ನರ್ ಅಪ್‍ಗೆ 6 ಲಕ್ಷ ಬಹುಮಾನ ಸಿಕ್ಕಿದು ಮೂರನೇ ಸ್ಥಾನದಲ್ಲಿರೋ ವಾಸುಕಿಗೆ 1 ಲಕ್ಷ , ದೀಪಿಕಾ ದಾಸ್‍ಗೆ ಉತ್ತಮ ಡ್ಯಾನ್ಸ್ ಅವಾರ್ಡ್‍ನಲ್ಲಿ 5 ಲಕ್ಷ ಜೊತೆಗೆ 1 ಲಕ್ಷ ಪ್ರೈಸ್ ಸಿಕ್ಕಿದೆ. ಭೂಮಿ ಶೆಟ್ಟಿಗೆ 1ಲಕ್ಷ ದೊರಕಿದೆ.