ಅಮೇರಿಕಾದ ಬಾಸ್ಕೆಟ್ ಬಾಲ್ ದಂತಕಥೆ ಕೋಬಿ ಬ್ರ್ಯಾಂಟ್ ಭಾನುವಾರ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ್ದಾರೆ.ಕ್ಯಾಲಿಫೋರ್ನಿಯಾದ ಮಾಲಿಬು ಬೆಟ್ಟದಲ್ಲಿ ಆಟಗಾರ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಬೆಟ್ಟಕ್ಕೆ ಅಪ್ಪಳಿಸಿದ್ದು ;ಕೋಬಿ ಬ್ರ್ಯಾಂಟ್ ತಮ್ಮ ಮಗಳು ಗಿಯಾನ್ನ ಸೇರಿ ಒಟ್ಟು 8 ಮಂದಿ ಸಾವನ್ನಪ್ಪಿದ್ದಾರೆ .
ತಮ್ಮದೇ ಸಿಕ್ರೋಸ್ಕಿ ಎಸ್- 76ಬಿ ಹೆಸರಿನ ಹೆಲಿಕಾಪ್ಟರ್ ಸುಮಾರು 160 ಕಿ.ಮೀ ಸ್ಪೀಡ್‍ನಲ್ಲಿ ಚಲಿಸುತ್ತಿದ್ದು ಮಂಜು ಆವರಿಸಿದ ಕಾರಣ ದಾರಿ ಕಾಣದೆ ಬೆಟ್ಟಕ್ಕೆ ಅಪ್ಪಳಿಸಿದೆ ಅನ್ನೋ ಮಾಹಿತಿ ಹೊರಬಿದ್ದಿದೆ. ಗುದ್ದಿದ ರಭಸಕ್ಕೆ ಸಂಪೂರ್ಣವಾಗಿ ಹೆಲಿಕಾಪ್ಟರ್ ನಲ್ಲಿದ್ದ 800 ಪೌಂಡ್ ಇಂಧನ ಹೊತ್ತಿ ಉರಿದಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಇನ್ನು ಘಟನೆಯ ತೀವೃತೆಗೆ ರಕ್ಷಣಾ ಕಾರ್ಯಚರಣೆಯಲ್ಲಿದ್ದವರಿಗೆ ಹೆಲಿಕಾಪ್ಟರ್‍ನಲ್ಲಿ ಸಾವನ್ನಪ್ಪಿದವರ ಗುರುತು ಪತ್ತೆಯಾಗುತ್ತಿಲ್ಲ ಕನಿಷ್ಟ 2-3 ದಿನಗಳಾದ್ರು ತನಿಖೆ ಪೂರ್ಣಗೊಳಿಸಲು ಸಮಯವನ್ನು ಅಧಿಕಾರಿಗಳು ಕೇಳುತ್ತಿದ್ದಾರೆ .
ಕಳೆದ 20 ವರ್ಷಗಳ ಕಾಲ ಬಾಸ್ಕೆಟ್ ಬಾಲ್ ಕ್ಷೇತ್ರದಲ್ಲಿ ಮಿಂಚಿದ್ದ ಕೋಬಿ ಬ್ರ್ಯಾಂಟ್ ಅದೆಷ್ಟೋ ಕ್ರೀಡಾ ಪ್ರೇಮಿಗಳ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ರು. ಮಾತ್ರವಲ್ಲ ಲಾಸ್ ಏಂಜಲೀಸ್ ಲೇಕರ್ಸ್‍ಗೆ ಸತತ ಐದು ಬಾರಿ ಪ್ರತಿಷ್ಠಿತ ಎನ್‍ಬಿಎ ಚಾಂಪಿಯನ್ನ ಪಟ್ಟ ತರಿಸಿಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ.ಮಗಳೆಂದರೆ ಇವರಿಗೆ ಪಂಚಪ್ರಾಣ ಈ ಹಿನ್ನಲೆ ಮಗಳನ್ನು ತನ್ನ ಜೊತೆ ಕರೆದುಕೊಂಡು ಹೋಗಿದ್ದ ಇವರಿಗೆ ಆಕ್ಸಿಡೆಂಟ್ ಯಮಲೋಕ ತೋರಿಸಿಕೊಟ್ಟಿದೆ .