ತುಳು ಚಿತ್ರರಂಗದ ಮೂಲಕ ಸಿನಿ ಜರ್ನಿಯನ್ನು ಪ್ರಾರಂಭ ಮಾಡಿದ ಮಂಗಳೂರಿನ ಬೆಡಗಿ ಸೋನಲ್ ಮೊಂತೆರೋ ಇದೀಗ ಕೋಸ್ಟಲ್ ವುಡ್ ಮಾತ್ರವಲ್ಲದೆ, ಸ್ಯಾಂಡಲ್ ವುಡ್ ಹಾಗೂ ಬಾಲಿವುಡ್ ನಲ್ಲೂ ನಾಯಕಿಯಾಗಿ ಮಿಂಚುತ್ತಿದ್ದಾರೆ. ಇದೀಗ ಬೆಲ್ ಬಾಟಂ ಸಿನಿಮಾದ ನಿರ್ದೇಶಕ ಜಯತೀರ್ಥ ನಿರ್ದೇಶನದಲ್ಲಿ ಮೂಡಿಬರುವ ಬನಾರಸ್ ಚಿತ್ರದಲ್ಲಿ ನಟಿಸಿದ್ದಾರೆ.
- ಕೋಸ್ಟಲ್ ವುಡ್ ನಲ್ಲಿ ಎಕ್ಕ ಸಕ, ಪಿಲಿಬೈಲ್ ಯಮುನಕ್ಕ ಚಿತ್ರದಲ್ಲಿ ನಾಯಕಿ ನಟಿಯಾಗಿ ಅಭಿನಯಿಸುವ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ಸೋನಲ್ ಮೊಂತೆರೋ, ಕನ್ನಡದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರ ನಿರ್ದೇಶನದಲ್ಲಿ ಮೂಡಿಬಂದ ಪಂಚತಂತ್ರ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಹೀಗಾಗಿ ತುಳು, ಕನ್ನಡ ಸೇರಿ ದೊಡ್ಡ ನಿರ್ದೇಶಕರ ಜೊತೆ ಕೆಲಸ ಮಾಡಿ ಸಾಲು ಸಾಲು ಅವಕಾಶಗಳನ್ನು ಗಿಟ್ಟಿಸಿಕೊಂಡಿರುವ ಸೋನಲ್ ಮೊಂತೆರೋ ಬಾಲಿವುಡ್ ‘ಸಾಜನ್ ಚಲೇ ಸಸುರಾಲ್ 2’ ಚಿತ್ರದಲ್ಲಿ ನಟಿಸುತ್ತಿದ್ದಾರೆ.ಸ್ಯಾಂಡಲ್ ವುಡ್ ನಲ್ಲಿ ಜಯತೀರ್ಥ ನಿರ್ದೇಶನದ ಬೆಲ್ ಬಾಟಂ ಚಿತ್ರ ಎಲ್ಲೆಡೆ ಬಹಳಷ್ಟು ಸದ್ದು ಮಾಡಿದ್ದು, ಇದೀಗ ಇವರ ನಿರ್ದೇಶನದಲ್ಲಿ ಬನಾರಸ ಚಿತ್ರವು ಮೂಡಿ ಬರಲಿದೆ. ಈ ಚಿತ್ರದಲ್ಲಿ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಪುತ್ರ ಜಾಹಿದ್ ಖಾನ್ ನಾಯಕನಾಗಿ ಇದೇ ಮೊದಲ ಬಾರಿಗೆ ಚಿತ್ರ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಚಿತ್ರದ ಮಹೂರ್ತ ಸಿಂಪಲ್ ಆಗಿ ನಡೆದಿದ್ದು, ಆಗಸ್ಟ್ ಕೊನೆಯಲ್ಲಿ ವಾರಾಣಾಸಿಯಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ. ಈ ಚಿತ್ರಕ್ಕೆ ವೈ ಬಿ ರೆಡ್ಡಿ ಬಂಡವಾಳ ಹೂಡಿದ್ದು, ಅಜನೀಶ್ ಬಿ ಲೋಕನಾಥ್ ಸಂಗೀತ ಸಂಯೋಜಿಸಲಿದ್ದಾರೆ. ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣವಿರಲಿದೆ.