ಕೇಂದ್ರ ಸರ್ಕಾರದ ಹೊಸ ನೀತಿ ಫಾಸ್ಟ್ ಟ್ಯಾಗ್ ಇದೀಗ ಎಲ್ಲಾ ಟೋಲ್‍ಗೇಟ್‍ಗಳಲ್ಲೂ ಜಾರಿ ಬಂದಿದೆ. ಆದ್ರೆ ಇದೀಗ ಅದೇ ಫಾಸ್ಟ್‍ಟ್ಯಾಗ್ ಹೆಸರಲ್ಲಿ ಟೋಲ್ ಸಿಬ್ಬಂದಿಗಳು ಹಗಲುದರೋಡೆ ಗೆ ಇಳಿದಿರೋದು ಸಾರ್ವಜನಿಕರ ಕೆಂಗಣ್ಣಿಗೆ ಕಾರಣವಾಗಿದೆ . ಇಂದು ದೇವಿಹಳ್ಳಿ- ಹಾಸನ ಟೋಲ್‍ಗೇಟ್ ಬಳಿ ಚಾಲಕರ ಟ್ರೇಡ್ ಯೂನಿಯನ್ ಅಧ್ಯಕ್ಷರ ವಾಹನವನ್ನು ತಡೆಗಟ್ಟಿದ ಸಿಬ್ಬಂದಿ ನಿಮ್ಮ ಅಕೌಂಟ್‍ನಲ್ಲಿ ಹಣವಿಲ್ಲ . ಹಣಕಟ್ಟಿ ಮುಂದೆ ಸಾಗಿ ಅಂತ ಧಮ್ಕಿ ಹಾಕಿದಲ್ಲದೆ; ವಾಹನವನ್ನು ತಡೆಹಿಡಿದಿದ್ದಾರೆ.
ಇದರಿಂದ ಕೋಪಗೊಂಡ ಅಧ್ಯಕ್ಷರು ಫಾಸ್ಟ್ ಟ್ಯಾಗ್‍ನಲ್ಲಿರುವ ಹಣವನ್ನು ತೋರಿಸಿದ ಅಧ್ಯಕ್ಷರು ಮಾತಿನ ಚಕಮಕಿಗಿಳಿದು ಫೇಸ್‍ಬುಕ್ ಲೈವ್ ಮಾಡಿದ್ದಾರೆ. ಇದೀಗ ಈ ವೀಡಿಯೋ ವೈರಲಾಗಿದ್ದು ಟೋಲ್‍ಗೇಟ್ ಅವಾಂತರ ಜನರಿಗೆ ಆಗೋ ಮೋಸದ ಬಗ್ಗೆ ಮನವರಿಕೆ ಮಾಡಿಕೊಟ್ಟಿದಾರೆ.