ಮುಂಬೈ: ಖ್ಯಾತ ನಟಿ ಮಂದಿರಾಬೇಡಿ ಅವರ ಪತಿ ರಾಜ್ ಕೌಶಾಲ್ ವಿಧಿವಶರಾಗಿದ್ದಾರೆ. ಚಿತ್ರ ನಟ, ನಿರ್ಮಾಪಕ ಮತ್ತು ನಿರ್ದೇಶಕ ರಾಜ್ ಕೌಶಾಲ್ ಅವರು ಇಂದು ಬೆಳಿಗ್ಗೆ ಹೃದಯಘಾತದಿಂದ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಬೆಳಗ್ಗೆ ರಾಜ್ ಕೌಶಾಲ್ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ. ಈ ಬಗ್ಗೆ ನಿರ್ದೇಶಕ ಒನಿರ್ ಅವರು ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Gone too soon. We lost Film maker and Producer @rajkaushal1 this morning. Very Sad. He was one of the producers of my first film #MyBrotherNikhil. One of those few who believed in our vision and supported us. Prayers for his soul. pic.twitter.com/zAitFfYrS7
— iamOnir (@IamOnir) June 30, 2021
ಬಾಲಿವುಡ್ ನಿರ್ಮಾಪಕರಾಗಿದ್ದ ಅವರು ಪ್ಯಾರ್ ಮೇ ಕಬಿ ಕಭಿ, ಶಾದಿ ಕಾ ಲಡ್ಡೂ ಮತ್ತು ಆಂಥೋನಿ ಕೌನ್ ಹೈ ಚಿತ್ರಗಳನ್ನು ನಿರ್ದೇಶಿಸಿದ್ದರು. ಮೈ ಬ್ರದರ್ ನಿಖಿಲ್, ಶಾದಿ ಕಾ ಲಡ್ಡೂ ಮತ್ತು ಪ್ಯಾರ್ ಮೇ ಕಭಿ ಕಭಿ ಚಿತ್ರಗಳನ್ನು ನಿರ್ಮಿಸಿ ಬಾಲಿವುಡ್ ನಿರ್ಮಾಕರ ಸಾಲಿನಲ್ಲಿ ಗುರುತಿಸಿಕೊಂಡಿದ್ದರು.