ಓಣಂ ಹಬ್ಬವೆಂದರೆ ಕೇರಳೀಯರಿಗೆ, ಮಲಯಾಳಿಗರಿಗೆ ಬಹು ಮುಖ್ಯ ಹಬ್ಬ.. ಈ ಹಬ್ಬವನ್ನು ಮಲಯಾಳಿ ಪಂಚಾಂಗದ ಮೊದಲ ತಿಂಗಳು ಚಿಂಗಮ್, ಅಂದರೆ ಅಗಸ್ಟ್-ಸೆಪ್ಟೆಂಬರ್ ತಿಂಗಳಿನಲ್ಲಿ ಪುರಾಣ ಪ್ರಸಿದ್ಧ ಸಾಮ್ರಾಟ ಮಹಾಬಲಿಯು ಮರಳಿ ಮನೆಗೆ ಬಂದ ಸಂತೇಕವಾಗಿ ಸಡಗರ ಸಂಭ್ರಮದಿಂದ ಕೊಂಡಾಡುತ್ತಾರೆ. ಈ ವೇಳೆ ಸಾಮಾನ್ಯರು ಸೆಲೆಬ್ರಿಟಿಗಳೆಂಬ ಭೇದವಿಲ್ಲದೆ ಎಲ್ಲರೂ ಕೂಡಿ ಈ ಹಬ್ಬದ ಆಚರಣೆ ಮಾಡುತ್ತಾರೆ.
ನಟಸಾರ್ವಭೌಮ ಚಿತ್ರದ ನಾಯಕಿ ನಟಿ ಅನುಪಮಾ ಸಹ ಈ ಬಾರಿ ಓಣಂ ಹಬ್ಬವನ್ನು ವಿಶೇಷವಾಗಿಯೇ ಆಚರಿಸಿಕೊಂಡಿದ್ದಾರೆ. ಮಲಯಾಳಿ ಗೆಟಪ್ ನಲ್ಲಿ ಮಿಂಚಿರುವುದಲ್ಲದೆ ಸಾಮಾಜಿಕ ತಾಣದ ಮೂಲಕ ಅಭಿಮಾನಿಗಳಿಗೆ ಹಬ್ಬದ ವಿಶ್ ತಿಳಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಹರಿದಾಡ್ತಿರುವ ಅನುಪಮಾರ ಫೋಟೋಗಳಂತೂ ಅಭಿಮಾನಿಗಳನ್ನ ಮೋಡಿಮಾಡಿದೆ.
© 2020 Udaya News – Powered by RajasDigital.