ನಿತ್ಯವೂ ಹಾಲು ಕುಡಿಯುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಲಿನೊಂದಿಗೆ ಕೇಸರಿ, ಬಾದಾಮಿ ಹುಡಿ ಹೀಗೆ ಅನೇಕ ವಸ್ತುಗಳನ್ನು ಬಳಕೆ ಮಾಡುವ ಮೂಲಕ ಅವುಗಳ ಪ್ರಯೋಜನವನ್ನೂ ಪಡೆಯುತ್ತೇವೆ. ಆದರೆ ಆ ಹಾಲಿಗೆ ದಾಲ್ಚಿನ್ನಿ ಪೌಡರ್ ಮಿಶ್ರ ಮಾಡಿ ಎಂದಾದರೂ ಕುಡಿದಿದ್ದೀರಾ..? ಇಲ್ಲವಾದರೆ ಇನ್ನು ತಪ್ಪದೆ ಅದನ್ನು ಟ್ರೈ ಮಾಡಿ..ಹೀಗೆ ಮಾಡುವುದರಿಂದ ಯಾವ್ಯಾವ ಆರೋಗ್ಯ ಸಮಸ್ಯೆಗಳಿಂದ ದೂರವಾಗಬಹುದು ಗೊತ್ತಾ..?
ದಾಲ್ಚಿನ್ನಿಯೊಂದಿಗೆ ಹಾಲನ್ನು ಮಿಶ್ರ ಮಾಡಿ ಕುಡಿಯುವುದರಿಂದ ನೋವಿನಿಂದ ಮುಕ್ತಿ ನೀಡುತ್ತದೆ. ಮಧುಮೇಹವನ್ನು ನಿಯಂತ್ರಿಸುವುದರ ಜೊತೆಗೆ ನಿದ್ರಾಹೀನತೆಯನ್ನು ತಡೆಗಟ್ಟುವಲ್ಲಿ ನೆರವಾಗುತ್ತದೆ. ನೆಗಡಿಯ ಸಮಸ್ಯೆಗಿದು ರಾಮಬಾಣದಂತೆ ವರ್ತಿಸುತ್ತದೆ, ಜೊತೆಗೆ ಗಂಟಲು ನೋವನ್ನು ನಿವಾರಿಸುತ್ತದೆ. ಅತಿಯಾದ ತೂಕದ ಸಮಸ್ಯೆಯಿಂದ ಕೊರಗುತ್ತಿರುವವರು ತೂಕನಷ್ಟ ಹೊಂದಲು ಇದಕ್ಕಿಂತ ಉತ್ತಮ ಆಯ್ಕೆ ಬೇರೊಂದಿಲ್ಲ. ಬಾಯಿಯ ಆರೋಗ್ಯಕ್ಕೆ ಹಿತಕರ ಹಾಗೂ ಜೀರ್ಣಕ್ರಿಯೆಗೂ ಇದು ಉತ್ತಮವಾಗಿದೆ. ಹೃದಯದ ಆರೋಗ್ಯ ಕಾಪಾಡಲು ಇದರಷ್ಟು ಒಳ್ಳೆಯದು ಯಾವೂದೂ ಇಲ್ಲ. ಅಲ್ಲದೆ ರೋಗನಿರೋಧಕ ಶಕ್ತಿಯನ್ನು ಸಂವರ್ಧಿಸಲು ನೆರವಾಗುತ್ತದೆ. ಇಂತಹ ಉಪಯುಕ್ತವಾದ ದಾಲ್ಚಿನಿಯನ್ನು ಹಾಲಿನೊಂದಿಗೆ ನೀವು ನಿತ್ಯವೂ ಸೇವಿಸಲು ಮರೆಯದಿರಿ.