ಕ್ಯಾಲಿಫೋರ್ನಿಯಾ,ಡಿ.16 : ಸಾಮಾಜಿಕ ಜಾಲತಾಣದಲ್ಲಂತೂ ದಿನಕ್ಕೊಂದು ವಿಚಾರಗಳು, ಫೋಟೋ, ವಿಡಿಯೋಗಳು ಟ್ರೆಂಡ್ ಕ್ರಿಯೇಟ್ ಮಾಡಿರುತ್ತದೆ.
ವೈರಲ್ ಆಗು ಸದ್ದು ಮಾಡುತ್ತಿರುತ್ತದೆ. ಯಸ್..ಸದ್ಯ ವೈರಲ್ ಆಗಿರುವ ಫೋಟೋವೊಂದು ನೋಡುಗರನ್ನು ಅಚ್ಚರಿಪಡಿಸಿದೆ. ಕ್ಯಾಲಿಫೋರ್ನಿಯಾದ ಸಮುದ್ರದ ತೀರದಲ್ಲಿ ಪುರುಷರ ಜನನಾಂಗದಂತೆ ಕಾಣುವ ಹುಳುಗಳು ರಾಶಿ ಬಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ತಜ್ಞರು ಅಭಿಪ್ರಾಯಪಟ್ಟಿರುವಂತೆ ಸುಮಾರು 10 ಇಂಚುಗಳಷ್ಟು ಉದ್ದವಿರುವ ಸಮುದ್ರಾಳದ ಜೀವಿಗಳಿವು. ಈ ಹುಳು ಶಿಷ್ನದಂತೆ ಕಾಣುವುದರಿಂದ ಇದಕ್ಕೆ ಪೆನಿಸ್ ಫಿಶ್ ಎಂದೂ ಕರೆಯುತ್ತಾರೆ. ಈ ಹುಳುಗಳು ಮಣ್ಣಿನಡಿಯಲ್ಲಿ `ಯು’ ಆಕಾರದಲ್ಲಿ ಬಿಲಗಳನ್ನು ಸೃಷ್ಟಿಸುತ್ತವೆ. ಈ ಬಿಲದಲ್ಲಿ ಇತರ ಜೀವಿಗಳೂ ಚಲಿಸುತ್ತವೆ. ಹೀಗಾಗಿ, ಈ ಹುಳುವನ್ನು `ಇನ್‌ಕೀಪರ್’ ಎಂದೂ ಗುರುತಿಸಲಾಗುತ್ತದೆ ಎಂದು ಹೇಳಿದ್ದಾರೆ ದಿ ವೈಲ್ಡ್‌ಲೈಫ್ ಸೊಸೈಟಿಯ ಜೀವಶಾಸ್ತ್ರಜ್ಞ ಇವಾನ್ ಪಾರ್. ಉತ್ತರ ಅಮೇರಿಕಾದ ಪಶ್ಚಿಮ ಕರಾವಳಿಯಲ್ಲಿ ಹೆಚ್ಚಾಗಿ ಈ ಹುಳುಗಳು ಕಾಣಸಿಗುತ್ತವೆ ಎನ್ನುತ್ತಾರೆ ತಜ್ಞರು.