ಬೆಂಗಳೂರು,ಸೆ.14: ರಾಜ್ಯದಲ್ಲಿ ಪ್ರಸ್ತುತ ಚಾಲನೆಯಲ್ಲಿರುವ ಟ್ರಾಫಿಕ್ ನಿಯಮಗಳು ಜನಸಾಮಾನ್ಯರಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ..ಈ ನಿಯಮಗಳ ಬಗ್ಗೆ ಪರ ಹಾಗೂ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಲೇ ಇದೆ. ಈ ನಡುವೆ ಕೇವಲ ಒಂದು ವಾರದಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಸಂಗ್ರಹಿಸಿದ ಮೊತ್ತವೆಷ್ಟು ಗೊತ್ತಾ..? ಬರೋಬ್ಬರಿ 2.40ಕೋಟಿ ರೂಪಾಯಿ ಎಂದರೆ ಅಚ್ಚರಿಪಡಬೇಕಿರುವ ವಿಚಾರ.
ಟ್ರಾಫಿಲ್ ನಿಯಮದಂತೆ ದುಬಾರಿ ಮೊತ್ತದ ಫೈನ್ ಇದ್ದರೂ ಸಹ ಲೆಕ್ಕಿಸದೆ ಅದೆಷ್ಟು ಮಂದಿ ಅದನ್ನು ಉಲ್ಲಂಘನೆ ಮಾಡಿ, ದಂಡ ತೆತ್ತಿದ್ದಾರೆ ಎಂಬುದೇ ಯೋಚಿಸಬೇಕಿರುವ ವಿಚಾರ.
ಕಳೆದ 8 ದಿನಗಳ ಅವಧಿಯಲ್ಲಿ 84,589 ಪ್ರಕರಣಗಳು ದಾಖಲಾಗಿದ್ದು, ಹೆಲ್ಮೆಟ್ ರಹಿತ ಬೈಕ್ ಚಾಲನೆಯ ವಿಚಾರದಲ್ಲಿ 16,710 ಪ್ರಕರಣಗಳು, 10,977 ಹಿಂಬದಿ ಬೈಕ್ ಸವಾರ ಹೆಲ್ಮೆಟ್ ಇಲ್ಲದೆ ಸವಾರಿ ಮಾಡಿರುವುದು, 10,128 ಸಿಗ್ನಲ್ ಜಂಪ್ ಕೇಸಸ್, 10,867 ನೋ ಪಾರ್ಕಿಂಗ್ ಏರಿಯಾದಲ್ಲಿ ಪಾರ್ಕ್ ಮಾಡಿರುವುದು ಮಾತ್ರವಲ್ಲದೆ ಡ್ರಿಂಕ್ ಆಂಡ್ ಡ್ರೈವ್‍ನ 150 ಪ್ರಕರಣಗಳು ದಾಖಲಾಗಿವೆ. ಉಳಿದ ಪ್ರಕರಣಗಳಿಗೆ ಹೋಲಿಸಿದರೆ ಡ್ರಿಂಕ್ ಆಂಡ್ ಡ್ರೈವ್ ಕೇಸ್‍ಗಳು ಎಂದಿಗಿಂತ ಈ ಬಾರಿ ಗಣನೀಯ ಇಳಿಕೆ ಕಂಡುಬಂದಿದೆ. ಏನಿಲ್ಲವೆಂದರೂ ದಿನವೊಂದಕ್ಕೆ 29ಲಕ್ಷ ಹಣ ಸಂಗ್ರಹವಾಗುತ್ತಿದೆ.