ಯಾವುದನ್ನ ಬೇಕಾದರೂ ಬಿಟ್ಟೇನು ಮೊಬೈಲನ್ನು ಹೊರತು ಎಂಬ ಕಾಲವಿದು..ಬಿಡುವು ಇರಲಿ, ಇಲ್ಲದಿರಲಿ ಮೊಬೈಲ್ ನೋಡುವ ಚಟವಂತೂ ಎಲ್ಲರಲ್ಲೂ ಸಾಮಾನ್ಯವಾಗಿದೆ..ನಿಮಗೆ ಗೊತ್ತಾ..ಟಾಯ್ಲೆಟ್ ನಲ್ಲಿ ಮೊಬೈಲ್ ಬಳಸಿದವರಲ್ಲಿ ಹೆಚ್ಚಿನವರೂ ಮೂಲವ್ಯಾಧಿ ಸಮಸ್ಯೆಗೆ ಒಳಗಾಗುತ್ತಾರೆ ಎಂಬುದು..
ಬ್ರಿಟನ್ ಮೂಲದ ವೈದ್ಯರು ಶಾಕಿಂಗ್ ನ್ಯೂಸ್ ಹೊರಹಾಕಿದ್ದು, ಮಲವಿರ್ಜನೆಯ ವೇಳೆ ಮೊಬೈಲ್ ಬಳಸಿದರೆ ಮೂಲವ್ಯಾಧಿ ಖಚಿತ ಎಂದಿದ್ದಾರೆ. ಈ ನಡುವೆ ಯುಗೌ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯಂತೆ ಬ್ರಿಟನ್ನಿನ ಶೇ.57% ರಷ್ಟು ಮಂದಿ ಟಾಯ್ಲೆಟ್ ನಲ್ಲಿ ಮೊಬೈಲ್ ಬಳಸುತ್ತಿರುವುದಾಗಿ ಹೇಳೀಕೊಂಡಿದ್ದಾರೆ. ಹೀಗಾಗಿ ಮೊಬೈಲ್ ನಿಂದ ದೂರವಿದ್ದು ಆರೋಗ್ಯ ಕಾಪಾಡಲು ವೈದ್ಯರು ಸಲಹೆ ನೀಡಿದ್ದಾರೆ.