ಜೀರಿಗೆ ಅಡುಗೆಮನೆಯಲ್ಲಿ ಕುಳಿತ ಅಪರೂಪದ ಮನೆಯ ಮದ್ದು. ಒಂದು ಟೀ ಚಮಚ ಹುಣಸೇಗೊಜ್ಜಿನಲ್ಲಿ ಅರ್ಧ ಚಮದಷ್ಟು ಜೀರಿಗೆ ಪುಡಿಯನ್ನು ಕಲಸಿ ಜೇನುತುಪ್ಪದ ಜೊತೆ ಕುಡಿದರೆ, ಆಮಶಂಕೆ ಹಾಗೂ ಅರಿಶಿನ ಕಾಮೆಯೂ ನಿವಾರಣೆ ಆಗುತ್ತದೆ.
ಬಾಯಿಂದ ಬರುವ ದುರ್ವಾಸನೆಯನ್ನು ದೂರಮಾಡಲು ಜೀರಿಗೆಯನ್ನು ಬಾಯಲ್ಲಿಹಾಕಿಕೊಂಡು ತಿನ್ನುವುದರಿಂದ ದುರ್ವಾಸನೆಮಡಿಮೆ ಆಗುತ್ತದೆ. ಜೊತೆಗೆ ಹಲ್ಲಿನ ನೋವು ಕಡಿಮೆ ಆಗುವುದು ಜೀರ್ಣಶಕ್ತಿ ವೃದ್ಧಿ ಆಗುವುದು.
ಜೀರಿಗೆ ಕಷಾಯಕ್ಕೆ ಹಾಲು, ಜೇನುತುಪ್ಪ, ಸೇರಿಸಿ ಬಸುರಿ ಹೆಣ್ಣು ಮಕ್ಕಳು ನಿತ್ಯ ಕುಡಿದರೆ ಎದೆ ಹಾಲು ವೃದ್ಧಿಯಾಗುತ್ತದೆ.
© 2020 Udaya News – Powered by RajasDigital.