ಗಿಮಿಕ್ ಚಿತ್ರದ ಲಾಭಾಂಶದಲ್ಲಿ ಶೇ.1ರಷ್ಟು ನೆರೆ ಸಂತ್ರಸ್ತರಿಗೆ ನೀಡಲಾಗುವುದು ಎಂದು ನಟ ಗೋಲ್ಡನ್ ಸ್ಟಾರ್ ಗಣೇಶ್ ಹೇಳಿದ್ದಾರೆ.
ಆ.15ರಂದು ಸಿನಿಮಾ ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ಇದು ಹಾರರ್ ಸಿನಿಮಾವೆಂದು ಚಿತ್ರ ತಂಡ ಹೇಳಿದೆ.
ನೆರೆಯಿಂದಾಗಿ ಜನರು ದಿಕ್ಕೆಟ್ಟಿದ್ದಾರೆ. ಅವರಿಗೆ ನೆರವು ನೀಡಬೇಕು. ಸ್ವಯಂ ಸೇವಕರು, ರಾಷ್ಟ್ರೀಯ ವಿಪತ್ತು ಪಡೆಯವರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ನನ್ನ ಮನವಿಗೆ ಸ್ಪಂದಿಸಿರುವ ಅಭಿಮಾನಿಗಳಿಗೆ ಅಭಾರಿಯಾಗಿರುವೆನು ಎಂದು ಗಣೇಶ್ ತಿಳಿಸಿದ್ದಾರೆ.