ಗಾಜಾ: ಗಾಜಾಪಟ್ಟಿಯಲ್ಲಿ ಇಸ್ರೇಲ್ ಸೇನೆ ಮತ್ತು ಹಮಾಸ್ ಬಂಡುಕೋರರ ನಡುವಿನ ಸಮರ ವಿರಾಮ ಘೋಷಣೆಯಾಗಿದೆ. ಈ ನಡುವೆ ಹಲವು ದಿನಗಳ ಕಾದಾಟದಲ್ಲಿ ಸುಮಾರು 243 ಮಂದಿ ಸಾವನ್ನಪ್ಪಿದ್ದಾರೆ. ಇಸ್ರೇಲ್ ಸೇನೆ ಮತ್ತು ಹಮಾಸ್ ಉಗ್ರರ ಪಡೆಯ ನಡುವೆ ನಡೆದ ಸಮರದ ಸಂದರ್ಭದಲ್ಲಿ ಹಲವು ದಿನಗಳ ಕಾಲ ವಾಯು ದಾಳಿ ನಡೆದಿತ್ತು.
ಕದನ ವಿರಾಮ ನಂತರ ಗಾಜಾ ಪಟ್ಟಿಯಲ್ಲಿ ಸಮರ ಸನ್ನಿವೇಶ ಇಲ್ಲ. ಅಲ್ಲಲ್ಲಿ ಅವಶೇಷಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಈ ನಡುವೆ ಗಾಜಾ ಪಟ್ಟಿಯಲ್ಲಿ ನಡೆದ ಇತ್ತೀಚಿನ ಕದನದಲ್ಲಿ ಸಾವನ್ನಪ್ಪಿದವರ ಸಂಖ್ಯೆ 243ಕ್ಕೆ ಏರಿಕೆಯಾಗಿದೆ ಎಂದು ಗಾಜಾ ಆರೋಗ್ಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಇಸ್ರೇಲ್ ಅನ್ನು ಗುರಿಯಾಗಿಸಿಕೊಂಡು ಹಮಾಸ್ ಬಂಡೂಕೋರ ಪಡೆ ರಾಕೆಟ್ ದಾಳಿನಡೆಸಿದ್ದು, ಈ ಸರಣಿ ದಾಳಿ ಸಂದರ್ಭದ ಸುಮಾರು 66 ಮಕ್ಕಳು ಮತ್ತು 39 ಮಹಿಳೆಯರೂ ಮೃತಪಟ್ಟಿದ್ದಾರೆ. 1,900ಕ್ಕೂ ಹೆಚ್ಚು ಜನರು ಗಾಯ ಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.