ಕೋಲಾರ, ಸೆ.10: ಕುಂಟೆಯೊಂದರ ಬಳಿ ಆಟವಾಡುತ್ತಾ ಗಣೇಶನನ್ನ ಬಿಡಲು ಹೋಗಿ ಆರು ಜನ ಮಕ್ಕಳು ನೀರು ಪಾಲಾಗಿರುವ ದಾರುಣ ಘಟನೆ ಕೋಲಾರದಲ್ಲಿಂದು ನಡೆದಿದೆ. ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಮರದಘಟ್ಟ ಗ್ರಾಮದಲ್ಲಿಂದು ಸಂಜೆ ೪ ೩೦ ರ ಸುಮಾರಿಗೆ ನಡೆದಿದ್ದು, ಕುಂಟೆ ಬಳಿ ಇದ್ದ ಜೇಡಿ ಮಣ್ಣಿನಿಂದ ಗಣೇಶ ತಯಾರು ಮಾಡಿ, ಅದಾದ ಬಳಿಕ ಗಣೇಶನನ್ನ ನೀರಿನಲ್ಲಿ ಬಿಡಲು ಹೋದ ೪ ಜನ ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು ೬ ಜನ ಅರೇಳು ವರ್ಷದ ಕಂದಮ್ಮಗಳು ಜಲಸಾಕಧಾಇಯಾಗಿದ್ದಾರೆ. ಇಂದು ಮೊಹರಾಂ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಇದ್ದ ಕಾರಣ ಗ್ರಾಮದ ಬಳಿಯ ಕೆರೆಯಲ್ಲಿ ಈಜಲು ಹೋಗಿದ್ದ ನಾಲ್ಕು ಹೆಣ್ಣು ಮಕ್ಕಳಾದ ತೇಜ, ವೈಷ್ಣವಿ, ವೀಣಾ, ರಷಿತಾ, ಗಂಟು ಮಕ್ಕಳಾದ ಧನಷ್, ರೋಹಿತ್, ಸಾವನ್ನಪ್ಪಿದ್ದಾರೆ. ಇನ್ನೂ ಗ್ರಾಮದ ಹೊರ ವಲಯದಲ್ಲಿರುವ ಮರಿಕುಂಟೆ ಕೆರೆಯಲ್ಲಿ ಮಕ್ಕಳು ಗಣೇಶ ಆಟವಾಡಿದ್ದು ಗಣೇಶ ಮಕ್ಕಳ ಪಾಲಿಗೆ ಕಂಟಕವಾಗಿದ್ದಾನೆ. ಇನ್ನೂ ಗ್ರಾಮದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
© 2020 Udaya News – Powered by RajasDigital.