ಶ್ರೀ ಕೃಷ್ಣನು ಜನ್ಮ ಹೊಂದಿದ ಪವಿತ್ರ ದಿನವನ್ನು ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸುವ ಸಂಪ್ರದಾಯವಿದೆ. ವಿಶ್ವದಾದ್ಯಂತ ಸಂತೋಷ, ಉತ್ಸಾಹ ಮತ್ತು ಹುರುಪಿನಿಂದ ಆಚರಿಸುವ ಹಿಂದೂಗಳ ಹಬ್ಬ 2019ರ ಸಾಲಿನ ಕೃಷ್ಣ ಜನ್ಮಾಷ್ಟಮಿ ಆಗಸ್ಟ್ 24ರ ಶನಿವಾರದಂದು ಆಚರಿಸಲಾಗುತ್ತಿದೆ.
ಶ್ರೀ ಕೃಷ್ಣನಿಗೆ ಸಿಹಿತಿಂಡಿಯೆಂದರೆ ಬಹಳ ಪ್ರೀತಿಯೆಂದು ಬಗೆ ಬಗೆಯ ಸಿಹಿತಿನಿಸುಗಳನ್ನು ಸಿದ್ಧಪಡಿಸುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಹಾಗೆ ಸಿದ್ಧಪಡಿಸಿದ ಸಿಹಿತಿನಿಸುಗಳೆಲ್ಲವನ್ನೂ ಶ್ರೀ ಕೃಷ್ಣನಿಗೆ ಅರ್ಪಿಸಿ ನಂತರ ‘ಭೋಗ್’ ಪ್ರಸಾದವೆಂದು ಸ್ವೀಕರಿಸುತ್ತಾರೆ.
ಜನ್ಮಾಷ್ಟಮಿಯಂದು ಉಪವಾಸಮಾಡುವುದು ಕೃಷ್ಣನ ಭಜನೆಮಾಡಿ ತಮ್ಮ ಶರೀರ, ಮನಸ್ಸು ಮತ್ತು ಆತ್ಮ ಇವುಗಳಲ್ಲಿರುವ ಕಲ್ಮಶಗಳ ಶುದ್ಧೀಕರಣವಾಗುವುದಕ್ಕೆ ಆಚರಿಸುತ್ತಾರೆ. ಭಕ್ತರು ಉಪವಾಸ ವ್ರತದ ಇಡೀ ದಿನವನ್ನು ಕೃಷ್ಣನ ಭಜನೆಯಲ್ಲಿ ತೊಡಗಿರುತ್ತಾರೆ. ಅದನ್ನು ಶ್ರೀ ಕೃಷ್ಣನ ಜನ್ಮವನ್ನು ಆಚರಿಸಲೂ ಸಹ ಮಾಡುತ್ತಾರೆ ಮತ್ತು ಹಾಗೆ ತಾವು ಮಾಡುವುದೆಲ್ಲಾ ‘ಬಾಲ ಗೋಪಾಲನಿಗೆ’ ಎಂದು ಅರ್ಪಣೆಮಾಡುತ್ತಾರೆ.
ಇವಿಷ್ಟೇ ಅಲ್ಲದೆ ಕೃಷ್ಣ ದೇವಾಲಯಗಳಲ್ಲಂದು ವಿಶೇಷ ಪೂಜೆ, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುವುದರಿಂದ ಅಲ್ಲಿಗೆ ತೆರಳಿ ಜನ್ಮಾಷ್ಟಮಿಯ ಉತ್ಸವದಲ್ಲಿ ಭಾಗಿಯಾಗುತ್ತಾರೆ. ಇನ್ನು ಪುಟಾಣಿ ಮಕ್ಕಳು ಕೃಷ್ಣ ರಾಧೆಯರಾಗಿ ಅಲಂಕರಿಸಿಕೊಂಡಿರುವುದನ್ನಂತೂ ನೋಡುವುದೇ ಅಂದ..ಒಟ್ಟಿನಲ್ಲಿ ಈ ಬಾರಿಯೂ ಅಷ್ಟಮಿಯ ಆಚರಣೆಗೆ ಸಿದ್ಧತೆಗೂ ಬಲು ಜೋರಾಗಿಯೇ ಇದೆ.