ಕಿಚ್ಚ ಸುದೀಪ್ ಅಭಿನಯದ ‘ಮ್ಯಾಕ್ಸ್’ ಸಿನಿಮಾ ಡಿಸೆಂಬರ್ 25ರಂದು ಬಿಡುಗಡೆಯಾಗಲಿದೆ.
ಕಲೈಪುಲಿ ಎಸ್. ಧಾನು ನಿರ್ಮಾಣ ಮಾಡಿರುವ ‘ಮ್ಯಾಕ್ಸ್’ ಸಿನಿ ಲೋಕದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ವಿಜಯ್ ಕಾರ್ತಿಕೇಯ ನಿರ್ದೇಶಿಸಿರುವ ‘ಮ್ಯಾಕ್ಸ್’ನಲ್ಲಿ ಕಿಚ್ಚ ಸುದೀಪ್ ಪ್ರಮುಖ ಪಾತ್ರ ಮಾಡಿದ್ದಾರೆ.
ಈ ನಡುವೆ, ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡವು ಬಿಡುಗಡೆಯ ಸುಳಿವು ನೀಡಿದ್ದರೆ, ಇನ್ನೊಂದೆಡೆ, ನಿರ್ಮಾಪಕ ಕಲೈಪುಲಿ ಎಸ್. ಧಾನು ಅವರು ‘ಮ್ಯಾಕ್ಸ್’ ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಡಿಸೆಂಬರ್ 25ರಂದು ವಿಶ್ವಾದ್ಯಂತ ‘ಮ್ಯಾಕ್ಸ್’ ಸಿನಿಮಾ ರಿಲೀಸ್ ಆಗಲಿದೆ ಎಂದವರು ತಿಳಸಿದ್ದಾರೆ.