ಬೆಳಗಾವಿ: ಮಾಜಿ ಸಚಿವ, ಡಿ.ಬಿ.ಇನಾಮದಾರ್ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮಂಗಳವಾರ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ವಿಧಿವಶರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.
ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಸಚಿವರಾಗಿದ್ದ ಡಿ.ಬಿ.ಇನಾಂದಾರ್ ಅವರು ಕಿತ್ತೂರಿನ ಧಣಿ ಎಂದೇ ಗುರುತಾಗಿದ್ದರು. ಹಿರಿಯ ನಾಯಕ ಡಿ.ಬಿ.ಇನಾಂದಾರ್ ನಿಧನಕ್ಕೆ ಗಣ್ಯರು ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.