ಕತ್ತಲಿನ ಜೀವನ, ಕಣ್ಣುಗಳಿಲ್ಲದ ಬದುಕು ತೀರಾ ಕಷ್ಟಕರ..ಹುಟ್ಟು ಕುರುಡು ಬೇರೆಯದು..ಆದರೆ ನಿರ್ಲಕ್ಷ್ಯದಿಂದ ಕಣ್ಣಿನ ದೃಷ್ಟಿಯ ಮಂದತೆಗೆ ಕಾರಣವಾಗುವುದು, ಕಣ್ಣು ನೋವಿನ ಸಮಸ್ಯೆ ಇತ್ತೀಚೆಗಂತೂ ಎಲ್ಲೆಡೆ ಕಂಡುಬರುವ ವಿಚಾರ.. ಮೊಬೈಲ್ ಹಾಗೂ ಕಂಪ್ಯೂಟರ್ ಗಳ ಅತಿಯಾದ ಬಳಕೆ, ಚಿಕ್ಕ ಅಕ್ಷರಗಳನ್ನು ಒಂದೇ ಸಮನೆ ನೋಡುವುದು, ಅತಿಯಾಗಿ ಕಣ್ಣೀರು ಸುರಿಸುವುದು, ಪೋಷಕಾಂಶಗಳ ಕೊರತೆ ಹೀಗೆ ಅನೇಕ ಕಾರಣಗಳಿಂದ ಕಣ್ಣು ನೋವು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಕಣ್ಣಿನ ಬಗ್ಗೆ ಅತಿಯಾದ ಕಾಳಜಿ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ.
- ಪುಸ್ತಕ ಓದುವಾಗ, ಕಂಪ್ಯೂಟರ್ ಬಳಕೆ ಮಾಡುವಾಗ, ಟಿವಿ ನೋಡುವಾಗ, ಮೊಬೈಲ್ ಯೂಸ್ ಮಾಡುವ ವೇಳೆ ನಿರ್ದಿಷ್ಟ ಅಂತರ ಹಾಗೂ ಭಂಗಿಯನ್ನು ಅನುಸರಿಸಬೇಕು.
- ಮಂದ ಬೆಳಕಿನಲ್ಲಿ ನೋಡುವುದಾಗಲೀ, ಓದುವುದಾಗಲೀ ಮಾಡಬಾರದು.
- ನಿರಂತರ ವೀಕ್ಷಣೆ ಮಾಡುವ ಬದಲು ಕಣ್ಣಿಗೆ ಆಗಾಗ ವಿಶ್ರಾಂತಿ ನೀಡಿ
- ಬಿಡುವಾದಾಗಲೆಲ್ಲಾ ತಣ್ಣಗಿನ ನೀರಿನಿಂದ ಕಣ್ಣುಗಳನ್ನು ಸ್ವಚ್ಛಗೊಳಿಸಿ
- ಸೊಪ್ಪಿನಲ್ಲಿ ವಿಟಮಿನ್ ಎ ಅಂಶ ಹೆಚ್ಚಿರುವುದರಿಂದ ಆಹಾರದಲ್ಲಿ ಮೆಂತ್ಯ, ಹರಿವೆ, ನುಗ್ಗೆ, ಅಗಸೆ ಹೂ ಇಂತವುಗಳ ಬಳಕೆ ಮಾಡಿ
- ವಿಟಮಿನ್ ಎ ಅಧಿಕವಿರುವ ಮಾವು ಹಾಗೂ ಪಪ್ಪಾಯ ಹಣ್ಣುಗಳ ಸೇವನೆ ಉತ್ತಮ
- ಕಣ್ಣು ನೋವಿರುವ ವೇಳೆ ಕನ್ನಡಕ ಧರಿಸುವುದು ಉತ್ತಮ
- ಕಣ್ಣಿನ ಸಮಸ್ಯೆಯಾದ ಸೂಕ್ತ ಸಮಯಕ್ಕೆ ಕಣ್ಣಿನ ವೈದ್ಯರನ್ನು ಸಂಪರ್ಕಿಸಿ