ಸುಳ್ಯ, ಕಡಬ, ನೆಲ್ಯಾಡಿಯಲ್ಲಿ ಅಂಗಡಿಗಳಲ್ಲಿ, ಪೆಟ್ರೋಲ್ ಪಂಪುಗಳಲ್ಲಿ ಭಾರೀ ಜನಜಂಗುಳಿ ಉಂಟಾಗಿತ್ತು. ಈ ಮಧ್ಯೆ ಕಡಬ ಪಂಚಾಯತ್ ಮಾಡಿದ ಯಡವಟ್ಟಿನಿಂದ ಸಮಸ್ಯೆ ಸೃಷ್ಟಿಯಾಗಿದೆ. ಜಿಲ್ಲಾಡಳಿತದ ಆದೇಶದ ನಡುವೆ ಕಡಬಕ್ಕೆ ಇಲ್ಲಿನ ಪಂಚಾಯತ್ ವಿಶೇಷ ನಿಯಮ ಜಾರಿ ಮಾಡಿದೆ. ಕಡಬ ಪಂಚಾಯತ್ ತೆಗೆದುಕೊಂಡ ನಿರ್ಧಾರಕ್ಕೆ ಬೇರೆ ಗ್ರಾಮದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಗಡಿ ಬಂದ್ ಮಾಡಿಸಿದ ಹಿನ್ನಲೆ ದಿನಸಿ ಖರೀದಿಸಲು ಜನರು ಪರದಾಟ ಮಾಡಿದ್ದಾರೆ. ಸ್ಥಳಕ್ಕೆ ಸಹಾಯಕ ಆಯುಕ್ತ ಯತೀಶ್ ಉಳ್ಳಾಲ್ ಭೇಟಿ ನೀಡಿ ಜನರ ಬಳಿ ಸಮಸ್ಯೆಗಳನ್ನು ಆಲಿಸಿದ್ದಾರೆ. ತಕ್ಷಣವೇ ಅಂಗಡಿ ತೆರೆಸಿ ಸಹಾಯಕ ಆಯುಕ್ತರು ಜನರ ಸಮಸ್ಯೆಗೆ ಸ್ಪಂದಿಸಿದ್ದಾರೆ. ಖುದ್ದು ಅಂಗಡಿಗಳಿಗೆ ತೆರಳಿದ ಎ.ಸಿ ಜನ ಸಾಮಾನ್ಯರಿಗೆ ಮಾಹಿತಿ ನೀಡಿದ್ದಾರೆ. ನಾಳೆಯಿಂದ ಯಾವುದೇ ತೊಂದರೆಗಳು ಉಂಟಾಗದಂತೆ ಜನರಿಗೆ ಆಹಾರ ಸಾಮಾಗ್ರಿಗಳು ತಲುಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
© 2020 Udaya News – Powered by RajasDigital.