ಮೇಷ:- ನಿಮ್ಮನ್ನು ಕಂಡು ಅಸೂಯೆ ಪಡುವಂತಹ ಜನ ಸಿಗಬಹುದು. ನಿಮ್ಮ ಬಗ್ಗೆ ನಿಮಗೆ ವಿಶೇಷ ನಂಬಿಕೆ ಇರಲಿ. ನಿಮ್ಮ ಕುಟುಂಬ ವರ್ಗದವರು, ಬಂಧುಗಳು, ಹಿತೈಷಿಗಳು ನಿಮ್ಮ ಕಾರ್ಯಕ್ಕೆ ಸಹಾಯ ಹಸ್ತ ನೀಡುವರು.
ವೃಷಭ:- ಮಕ್ಕಳು ಅನವಶ್ಯಕವಾಗಿ ಮುನಿಸಿಕೊಳ್ಳಬಹುದು. ಬೆಳೆದ ಮಕ್ಕಳನ್ನು ದಂಡಿಸುವಾಗ ಎಚ್ಚರಿಕೆಯಿಂದ ಇರಬೇಕು. ಸದ್ಯಕ್ಕೆ ಅವರ ಆಚಾರ, ವಿಚಾರಗಳನ್ನು ಟೀಕೆ ಮಾಡದೆ ಸೂಕ್ತ ಸಮಯಕ್ಕಾಗಿ ಕಾಯುವುದು ಒಳಿತು.
ಮಿಥುನ:- ಎಷ್ಟೇ ಕೋಪ ಬಂದರೂ ಆರ್ಭಟ ಮಾಡಬೇಡಿ. ಕೋಪ ಅನರ್ಥಕ್ಕೆ ದಾರಿ. ಮಾತಾ ದುರ್ಗಾದೇವಿಯನ್ನು ಪ್ರಾರ್ಥಿಸುವುದು ಒಳ್ಳೆಯದು. ಆದಷ್ಟು ತಾಳ್ಮೆಯನ್ನು ಪ್ರದರ್ಶಿಸಿ.
ಕಟಕ:- ದೂರದ ಪ್ರಯಾಣ ದಿಢೀರನೇ ನಿರ್ಧಾರವಾಗುವ ಸಾಧ್ಯತೆ ಇದೆ. ಸಂಗಾತಿಯ ಚುಚ್ಚುಮಾತುಗಳು ಮನಸ್ಸಿಗೆ ಆಘಾತವನ್ನುಂಟು ಮಾಡುವುದು. ವಿಘ್ನನಿವಾರಕ ಗಣೇಶನ ಮಂದಿರಕ್ಕೆ ಹೋಗಿ ಪ್ರಾರ್ಥಿಸಿ. ಸಾಧ್ಯವಾದಷ್ಟು 21 ಗರಿಕೆ ಪತ್ರೆಗಳನ್ನು ನೀಡಿ.
ಸಿಂಹ:- ಹತ್ತಿರದ ಜನರೇ ಕೆಲವು ದೋಷಾರೋಪಗಳನ್ನು ಮಾಡುವ ಸಾಧ್ಯತೆ ಇದೆ. ಆದರೆ ನಿಮ್ಮ ಬಾಲ್ಯ ಸ್ನೇಹಿತರು ಆರೋಪಗಳಲ್ಲಿಹುರುಳಿಲ್ಲಎಂದು ಸಾಬೀತು ಪಡಿಸುವುದರಿಂದ ಮನಸ್ಸಿಗೆ ಕೊಂಚ ನಿರಾಳವಾಗುವುದು.
ಕನ್ಯಾ:- ಲವಲವಿಕೆಯ ಮಾತುಗಳು ನಿಮ್ಮನ್ನು ನಾಲ್ಕು ಜನರ ನಡುವೆ ಗೆಲುವಿನ ದಾರಿಗೆ ತಲುಪಿಸುತ್ತವೆ. ಮನೆಯಲ್ಲಿನ ವಾತಾವರಣ ಆಹ್ಲಾದಕರವಾಗಿದ್ದು ಮನಸ್ಸಿಗೆ ಸಂತೋಷ, ನೆಮ್ಮದಿ ನೀಡುವುದು.
ತುಲಾ:- ಹಳೇ ವ್ಯಾಜ್ಯವೊಂದರಿಂದ ಹೊರಬರುವ ನಿಮಗೆ ಹೊಸ ಅವಕಾಶಗಳು ಕೈಬೀಸಿ ಕರೆಯುವವು. ಇವು ನಿಮ್ಮ ಸಿದ್ಧಿಗೆ ರಹದಾರಿ ಆಗಲಿದೆ. ಮಡದಿ ಮಕ್ಕಳೊಂದಿಗೆ ಸಂತೋಷದಿಂದ ಕಾಲ ಕಳೆಯುವ ಸಂದರ್ಭ ಬರುವುದು.
ವೃಶ್ಚಿಕ:- ಹಿರಿಯರನ್ನು ಆರೈಕೆ ಮಾಡುವ ವಿಚಾರದಲ್ಲಿಹಿಂದೇಟು ಹಾಕುವುದು ಬೇಡ. ನಿಮ್ಮ ಎಲ್ಲಾಸಮಸ್ಯೆಗಳಿಗೂ ಸೂಕ್ತ ಪರಿಹಾರ ಸಿಗುವುದು. ಗುರು, ಹಿರಿಯರ ಆಶೀರ್ವಾದ ಪಡೆಯಿರಿ.
ಧನುಸ್ಸು:– ಖರ್ಚಿನ ದಾರಿಗಳನ್ನು ನಿಯಂತ್ರಿಸಿ. ಹಾಸಿಗೆ ಇದ್ದಷ್ಟೇ ಕಾಲು ಚಾಚುವುದು ಒಳ್ಳೆಯದು. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ. ಬಡವರಿಗೆ ಆಹಾರ ನೀಡುವುದು ಒಳ್ಳೆಯದು. ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿರುವುದು.
ಮಕರ:- ನಿಮ್ಮ ಬಾಳಸಂಗಾತಿಯ ವಿಚಾರದಲ್ಲಿಅಲಕ್ಷತ್ರ್ಯ ಮಾಡುವುದು ಬೇಡ. ಅವರ ಸಲಹೆಗಳು ನಿಮಗೆ ಅನುಕೂಲಕರವಾಗಿರುವುವು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಮಕ್ಕಳು ವಿದ್ಯಾಭ್ಯಾಸದಲ್ಲಿಪ್ರಗತಿ ಸಾಧಿಸುವರು.
ಕುಂಭ:- ಉನ್ನತ ವ್ಯಾಸಂಗಕ್ಕೆ ಅಪರೂಪದ ಅವಕಾಶಗಳು ಲಭ್ಯವಾಗಲಿವೆ. ಶ್ರೀದುರ್ಗಾ ಅಷ್ಟೋತ್ತರ ಜಪಿಸುವುದು ಒಳ್ಳೆಯದು. ಯಾವುದಾದರೂ ದೇವಿ ಮಂದಿರದಲ್ಲಿಅರ್ಚನೆ ಮಾಡಿಸಿ. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುವುದು.
ಮೀನ:- ಹಳೆ ಕೆಲಸದ ಸ್ಥಳದಲ್ಲೇ ಮತ್ತೆ ಹೊಸ ಅವಕಾಶಗಳು ಸಿಗುವಂತಹ ಉತ್ತಮ ವಿಚಾರ ಕೈಗೂಡುವುದು. ಷೇರು ಬಜಾರಿನಲ್ಲಿಹಣ ಹೂಡುವಾಗ ಎರಡು ಬಾರಿ ಚಿಂತಿಸಿ. ಹಾಕಿದ ಹಣಕ್ಕೆ ಉತ್ತಮ ಲಾಭ ಬರದೆ ಇರುವ ಸಾಧ್ಯತೆ ಇದೆ.