ಮಂಗಳವಾರ ಸಿಎಂ ಬಿ.ಎಸ್ ಯಡಿಯೂರಪ್ಪ 1610 ಕೋಟಿ ಭರ್ಜರಿ ಪ್ಯಾಕೇಜ್‍ನ್ನು ರಾಜ್ಯಕ್ಕೆ ಘೋಷಿಸಿದ್ದಾರೆ. ಈ ಪ್ಯಾಕೇಜ್‍ನಲ್ಲಿ ಆಟೋ , ಟ್ಯಾಕ್ಸಿ ಚಾಲಕರಿಗು ವಿಶೇಷ ಕೊಡುಗೆಯನ್ನು ನೀಡಿದ್ದಾರೆ. ಕೊರೋನಾ ಹಾಗೂ ಲಾಕ್‍ಡೌನ್‍ನಿಂದ ಟ್ಯಾಕ್ಸಿ ಮತ್ತು ಆಟೋ ಚಾಲಕರು ತತ್ತರಿಸಿ ಹೋಗಿದ್ದಾರೆ.ಇದನ್ನು ಗಮನಿಸಿರೋ ಸರ್ಕಾರ 5 ಸಾವಿರ ರೂ. ಪರಿಹಾರ ನೀಡೋದಾಗಿ ಘೋಷಣೆ ಮಾಡಲಾಗಿದೆ.
ಹಾಗಿದ್ರೆ ಯಾವ ಆಟೋ -ಟ್ಯಾಕ್ಸಿ ಚಾಲಕರಿಗೆ ಪರಿಹಾರ ನಿಧಿ ಸಿಗಲಿದೆ ಅನ್ನೋದು ಇಲ್ಲಿದೆ ನೋಡಿ;-
- ಅನುಜ್ಞಾ ಪತ್ರ ಮತ್ತು ಬ್ಯಾಡ್ಜ್ ಹೊಂದಿರುವ ಚಾಲಕರು ಮಾತ್ರ ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ
2.ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ದೈನಂದಿನ ಉದ್ಯೋಗ ಮಾಡಲಾಗದೆ ಆದಾಯ ಕಳೆದುಕೊಂಡಿದ್ದವರು ಸ್ವಯಂ ಘೋಷಣೆ ಮಾಡಿಕೊಳ್ಳಬೇಕು.
3.ಸಾರಥಿ-4 ತಂತ್ರಾಂಶದಿಂದ ಚಾಲನಾ ಅನುಜ್ಞಾ ಪತ್ರದ ವಿವರವನ್ನು ನೇರವಾಗಿ ಪಡೆದುಕೊಳ್ಳಬೇಕು
4.ಚಾಲಕರ ಆಧಾರ್ ಕಾರ್ಡಿನ ಜೊತೆಗೆ ಮಾರ್ಚ್ 1 ,2020 ಕ್ಕೆ ಚಾಲ್ತಿಯಲ್ಲಿರುವ ಅನುಜ್ಞಾ ಪತ್ರದ ವಿವರಗಳನ್ನು ಪೋರ್ಟಲ್‍ನಲ್ಲಿ ನಮೂದಿಸಬೇಕು
5.ಫಲಾನುಭವಿಗಳು ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಲು ಅನುವಾಗುವಂತೆ ಅರ್ಹ/ ಅನರ್ಹ ಅರ್ಜಿದಾರರನ್ನು ತಂತ್ರಾಂಶದಲ್ಲಿ ಅಳವಡಿಸಿಕೊಳ್ಳಬೇಕು.