ಬೆಂಗಳೂರು,ನ.09: ವರ್ಷಗಳ ಹೋರಾಟಕ್ಕೆ ಕೊನೆಗೂ ಫಲ ದಕ್ಕಿದೆ. ಅಯೋಧ್ಯೆಯ ತೀರ್ಪು ಇಂದು ಹೊರಬಿದ್ದಿದ್ದು, ದೇಶಾದ್ಯಂತ ಜನ ಸುಪ್ರೀಂ ತೀರ್ಪನ್ನು ಸ್ವಾಗತಿಸಿದ್ದಾರೆ. ಶ್ರೀರಾಮಸೇನೆಯ ಮುಖ್ಯಸ್ಥರಾಗಿರುವ ಪ್ರಮೋದ್ ಮುತಾಲಿಕ್ ಅಯೋಧ್ಯೆಯ ಐತಿಹಾಸಿಕ ತೀರ್ಪನ್ನು ಸ್ವಾಗತಿಸಿದ್ದಾರೆ.
ಅಯೋಧ್ಯೆ ಹೋರಾಟ 500 ವರ್ಷಗಳದ್ದು. ರಾಮನ ಜನ್ಮ ಸ್ಥಾನದಲ್ಲಿ ಭವ್ಯ ದೇವಸ್ಥಾನ ಆಗಬೇಕು ಎನ್ನುವಂಥದ್ದು ಎಲ್ಲರ ಒತ್ತಾಸೆಯಾಗಿತ್ತು. ಇಂದು ಸುಪ್ರೀಂ ಕೋರ್ಟ್ ಕೊಟ್ಟಂತಹ ಸಾಂವಿಧಾನಿಕ ತೀರ್ಪು ಇದನ್ನೇ ಹೇಳುವಂತಿದೆ. ಇದನ್ನು ಶ್ರೀರಾಮಸೇನೆ ಸಂಪೂರ್ಣವಾಗಿ ಸ್ವಾಗತಿಸುತ್ತದೆ. ಒಟ್ಟಿನಲ್ಲಿ ಇವತ್ತು ರಾಮನಿಗೆ ಮುಕ್ತಿ ಸಿಕ್ಕಿದೆ. 500 ವರ್ಷಗಳ ಕಳಂಕ ಹೋರಾಟ, 76ಕ್ಕೂ ಹೆಚ್ಚು ಯುದ್ಧಗಳು,30 ಲಕ್ಷ ಜನರ ಬಲಿದಾನ ಹಾಗೂ ತ್ಯಾಗಕ್ಕೆ ಇಂದು ನ್ಯಾಯ ಸಿಕ್ಕಿದೆ. ಇದು ಭಾರತೀಯರಿಗೆ, ನೂರು ಕೋಟಿ ಹಿಂದುಗಳಿಗೆ ಅತ್ಯಂತ ಆನಂದದ ದಿನ, ದೀಪಾವಳಿಯ ದಿನ. ಐತಿಹಾಸಿಕವಾದ, ಶ್ರೇಷ್ಟವಾದ ದಿನ ಎಂಬುದಾಗಿ ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.