ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಬೆಂಗಳೂರಿನಲ್ಲಿಂದು ಸಿದ್ದರಾಮಯ್ಯ ಅವರ ನೇತೃತ್ವದ ಸಂಪುಟ ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಇದೀಗ ಯಾರಿಗೆ ಯಾವ ಖಾತೆ ಎಂಬ ಕುತೂಹಲ ಉಂಟಾಗಿದೆ.
#WATCH | Opposition leaders display their show of unity at the swearing-in ceremony of the newly-elected Karnataka government, in Bengaluru. pic.twitter.com/H1pNMeoeEC
— ANI (@ANI) May 20, 2023
ಪ್ರಮಾಣವಚನ ಸ್ವೀಕರಿಸಿದ 8 ಸಚಿವರು:
- ಎಂ. ಬಿ. ಪಾಟೀಲ್ (ಲಿಂಗಾಯತ)
- ಡಾ. ಜಿ. ಪರಮೇಶ್ವರ್ (ದಲಿತ-ಬಲ)
- ಪ್ರಿಯಾಂಕ ಖರ್ಗೆ (ದಲಿತ-ಬಲ)
- ಕೆ.ಎಚ್. ಮುನಿಯಪ್ಪ (ದಲಿತ-ಎಡ)
- ಸತೀಶ್ ಜಾರಕಿಹೊಳಿ (ಪ.ಪಂ.-ವಾಲ್ಮಿಕಿ)
- ಕೆ. ಜೆ. ಜಾರ್ಜ್ (ಕ್ರಿಶ್ಚಿಯನ್)
- ರಾಮಲಿಂಗಾ ರೆಡ್ಡಿ (ರೆಡ್ಡಿ ಸಮುದಾಯ)
- ಜಮೀರ್ ಅಹ್ಮದ್ ಖಾನ್ (ಮುಸ್ಲಿಂ)
ಡಾ. ಜಿ. ಪರಮೇಶ್ವರ್ ಅವರು ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಕೆಜೆ ಜಾರ್ಜ್ ಮತ್ತು ಎಂಬಿ ಪಾಟೀಲ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ರಾಮಲಿಂಗಾರೆಡ್ಡಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಜಮೀರ್ ಅಹ್ಮದ್ ಖಾನ್ ಅವರು ಅಲ್ಲಾಹ್ ಮತ್ತು ತಮ್ಮ ತಾಯಿಯ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಈ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಇದೀಗ ಯಾರಿಗೆ ಯಾವ ಖಾತೆ ಎಂಬ ಕುತೂಹಲ ಉಂಟಾಗಿದೆ.