ಮಲ್ಲಫುರಂ: ಒಂದಿಲ್ಲೊಂದು ವಿವಾದಕ್ಕೆ ಗುರಿಯಾಗುತ್ತಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಕೇರಳದಲ್ಲಿ ಆಕ್ಷೇಪಾರ್ಹ ರೀತಿಯಲ್ಲಿ ಮೆರವಣಿಗೆ ನಡೆಸಿದೆ ಎನ್ನಲಾಗಿದ್ದು ಈ ಕುರಿತ ವೀಡಿಯೋ ಈ ಸಂಘಟನೆಯನ್ನು ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿಸಿದೆ.
ಈ ಸಂಬಂಧಧ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ರಾಷ್ಟಮಟ್ಟದಲ್ಲಿ ಸುಧಿಯಾಗುತ್ತಿದೆ.
ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ನಡೆದಿದೆ ಎನ್ನಲಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮೆರವಣಿಗೆಯಲ್ಲಿ ಬ್ರಿಟೀಷರ ವೇಷಧಾರಿಗಳಿಗೆ ಕೋಳ ತೊಡಿಸಿ ಎಳೆದೊಯ್ಯುವ ಅಣಕು ಪ್ರದರ್ಶನ ಮಾಡಲಾಗಿತ್ತು ಎನ್ನಲಾಗಿದೆ. ಆ ಮೆರವಣಿಗೆಯಲ್ಲೇ ಆರೆಸ್ಸೆಸ್‌ನ ಇಬ್ಬರು ಕಾರ್ಯಕರ್ತರನ್ನೂ ಸರಪಳಿಯಿಂದ ಬಿಗಿದು ಕರೆದೊಯ್ಯುವ ರೀತಿ ವ್ಯಂಗ್ಯ ಸನ್ನಿವೇಶವನ್ನು ಬಿಂಬಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಆರೆಸ್ಸೆಸ್ ಕಾರ್ಯಕರ್ತರನ್ನು ಈ ರೀತಿ ಅವಮಾನಿಸಿರುವ ವೈಖರಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಕೆಲವು ದಿನಗಳಿಂದ ಪಾಪ್ಯುಲರ್ ಫ್ರಂಟ್‌ನ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಸರಣಿ ಕಾರ್ಯಕ್ರಮಗಳು ನಡೆಯುತ್ತಿವೆ. ಇದೇ ಸಂದರ್ಭದಲ್ಲಿ ಕೇರಳದ ಮಲಪ್ಪುರಂ ಸಹಿತ ಹಲವೆಡೆ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರು ಮೆರವಣಿಗೆಗಳನ್ನು ನಡೆಸಿದ್ದರು. ಈ ಪೈಕಿ ಚೆಲರಿ ಎಂಬಲ್ಲಿ ನಡೆಸಿದ ಮೆರವಣಿಗೆಯಲ್ಲಿ ಪಿಎಫ್‌ಐ ಕಾರ್ಯಕರ್ತರು ಆರೆಸ್ಸೆಸ್ ಕಾರ್ಯಕರ್ತರನ್ನು ಹಿಂಸಾತ್ಮಕ ರೀತಿಯ ಸನ್ನಿವೇಶ ಇತ್ತು ಎಂಬುದನ್ನು ಈ ವೀಡಿಯೋ ತುಣುಕುಗಳು ಬಿಂಬಿಸಿವೆ. ಆರೆಸ್ಸೆಸ್ ಕಾರ್ಯಕರ್ತರನ್ನು ಕಟ್ಟಿ ಕರೆದೊಯ್ದ ರೀತಿಯ ಬಹಿರಂಗ ಅಣಕು ಪ್ರದರ್ಶನದಲ್ಲಿ ಯುವಕರು ಘೋಷಣೆಗಳನ್ನೂ ಕೂಗುತ್ತಿದ್ದಂತಿದೆ.
ಈ ಆಕ್ಷೇಪಾರ್ಹ ಸನ್ನಿವೇಶದ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ವೀಡಿಯೋದಲ್ಲಿ ‘ಲಾಹಿಲಾಹ ಇಲ್ಹಾಲ್ಹಾ’ ಎಂಬ ಘೋಷಣೆಯೂ ಮೊಳಗುತ್ತಿತ್ತು.
ಇದನ್ನೂ ಓದಿ.. RSS ಬಗ್ಗೆ ಆಕ್ಷೇಪಾರ್ಹ ನಡೆ; PFI ವಿರುದ್ಧ ಕ್ರಮ ಅಗತ್ಯ ಎಂದ ಬಿಜೆಪಿ
ಹಿಂದೂ ಸಂಘಟನೆಗಳ ಕಾರ್ಯವೈಖರಿ ವಿರೋಧಿಸುತ್ತಲೇ ಬಂದಿರುವ ಪಿಎಫ್‌ಐ, ಸಂಘಪರಿವಾರದ ಎದುರಾಳಿ ಎಂಬಂತೆಯೇ ಬಿಂಬಿತವಾಗಿದೆ. ಇತ್ತೀಚೆಗೆ ಮಂಗಳೂರು ಸಮೀಪ ಕಾರ್ಯಕ್ರಮದಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡಲಾಗಿದೆ ಎಂಬ ಕಾರಣಕ್ಕಾಗಿ ಕಾನೂನು ಕ್ರಮಕ್ಕೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸೂಚಿಸಿದ್ದರು. ಈ ನಡುವೆಯೂ ಕೇರಳದಲ್ಲಿನ ಪ್ರಕರಣವೂ ಪಿಎಫ್‌ಐ ಮುಖಂಡನ್ನು ಸಂಕಷ್ಟಕ್ಕೆ ಸಿಲುಕಿಸಿದೆ.