ನವದೆಹಲಿ: ತೀವ್ರ ಕುತೂಹಲ ಸೃಷ್ಟಿಸಿದ್ದ WPL 2024 ವನಿತೆಯರ ಕ್ರಿಕೆಟ್ ಹಬ್ಬದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವನಿತೆಯರು ಇತಿಹಾಸ ನಿರ್ಮಿಸಿದ್ದಾರೆ, : ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡ RCB ವನಿತೆಯರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
WPL 2024 ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8 ವಿಕೆಟ್ ಗಳಿಂದ ಸೋಲಿಸಿದ RCB ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 13 ರನ್ ಗಳಿಸಿತ್ತು. 114 ರನ್ ಗಳ ಗುರಿ ಬೆನ್ನಟ್ಟಿದ RCB ಮೂರು ಎಸೆತಗಳು ಬಾಕಿ ಇರುವಂತೆ 115 ರನ್ ಪೇರಿಸಿ ಜಯದ ದಡ ನಿಬ್ಬೆರಗಾಗಿಸಿದರು.