ಬಸ್ ಚಾಲಕ ದಿಢೀರ್ ಅಸ್ವಸ್ಥರಾದ ಸಂದರ್ಭ.. ಪ್ರಯಾಣಿಕರೆಲ್ಲರೂ ತಬ್ಬಿಬ್ಬು.. ಆತಂಕದ ಪರಿಸ್ಥಿತಿ.. ಆ ವೇಳೆ ಧೀರ ವನಿತೆಯೊಬ್ಬಳು ಬಸ್ ಚಲಾಯಿಸಿ ಚಾಲಕನನ್ನು ಆಸ್ಪತ್ರೆಗೆ ಕರೆದೊಯ್ದ ಪ್ರಸಂಗ ಪುಣೆ ಬಳಿ ನಡೆದಿದೆ.
ಮಿನಿ ಬಸ್ಸಿನ ಚಾಲಕನಿಗೆ ಪೀಡ್ಸ್ ಬಂದಿದೆ. ಕೂಡಲೇ ಆತ ಬಸ್ಸನ್ನು ನಿಲ್ಲಿಸಿದ್ದಾನೆ. ಆ ವೇಳೆ ಬಸ್‌ನಲ್ಲಿದ್ದ ಮಹಿಳೆಯರು, ಮಕ್ಕಳು ಗಾಬರಿಯಾಗಿದ್ದಾರೆ. ದುರ್ಗಮ ಹಾದಿ ಮಧ್ಯೆ ಮುಂದೇನು ಎಂದು ಎಲ್ಲರೂ ಆತಂಕದಲ್ಲಿದ್ದಾಗ ಮಹಿಳೆಯೊಬ್ಬರು ಬಸ್ ಚಲಾಯಿಸಲು ಮುಂದಾದರು. ಆ ಮಹಿಳೆಯೇ ಸುಮಾರು 10 ಕಿ.ಮೀ ದೂರ ಬಸ್ಸು ಚಲಾಯಿಸಿ, ಅಸ್ವಸ್ಥ ಚಾಲಕನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವನಿತೆಯ ಸಾಹಸಕ್ಕೆ ಸಕತ್ ಲೈಕ್ಸ್ ವ್ಯಕ್ತವಾಗಿವೆ.
#Pune woman drives the bus to take the driver to hospital after he suffered a seizure (fit) on their return journey. #Maharashtra pic.twitter.com/Ad4UgrEaQg
— Ali shaikh (@alishaikh3310) January 14, 2022