ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ‘ಟೈಮ್ಸ್ ನೌ -ಇಟಿಜಿ ರಿಸರ್ಚ್’ ಸಮೀಕ್ಷೆ ಹೇಳಿದೆ.
ಚುನಾವಣೆ ಕಾವೇರುತ್ತಿದ್ದಂತೆಯೇ ಈ ಸಮೀಕ್ಷೆಯ ಫಲಿತಾಂಶ ಅನೇಕಾನೇಕ ಲೆಕ್ಕಾಚಾರಗಳಿಗೆ ಮುನ್ನುಡಿ ಬರೆದಿದೆ. ಎನ್ಡಿಎ 370 ಸ್ಥಾನ ಗೆಲ್ಲುವ ಸಾಧ್ಯತೆಗಳತ್ತ ಈ ಸಮೀಕ್ಷೆ ಬೆಳಕು ಚೆಲ್ಲಿದೆ.
ಫೆಬ್ರವರಿ ತಿಂಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದ್ದು, ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗುವ ಸಾಧ್ಯತೆಗಳ ಬಗ್ಗೆಯೂ ಸಮೀಕ್ಷೆ ವಿಶ್ಲೇಷಣೆ ಮಾಡಿದೆ. ಶೇ.64 ಮಂದಿ ಮೋದಿ ಬಗ್ಗೆ ಒಲವು ವ್ಯಕ್ತಪಡಿಸಿದರೆ, ಶೇ.17ರಷ್ಟು ಜನರು ರಾಹಲ್ ಗಾಂಧಿ ಬಗ್ಗೆ ಒಲವು ತೋರಿದ್ದಾರೆ.
ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಾಧ್ಯತೆ?
- ಬಿಜೆಪಿ: 329ರಿಂದ 350,
- ಕಾಂಗ್ರೆಸ್: 27ರಿಂದ 47,
- ವೈಎಸ್ಆರ್ ಕಾಂಗ್ರೆಸ್: 21ರಿಂದ 22,
- ಡಿಎಂಕೆ: 24ರಿಂದ 28,
- ಟಿಎಂಸಿ: 17ರಿಂದ 21,
- ಬಿಜೆಡಿ: 10ರಿಂದ 12,
- ಆಪ್: 5ರಿಂದ 7,
- ಇತರರು: 72ರಿಂದ 92.