ಲಖ್ನೋ: ಬಿಜೆಪಿಯನ್ನು ವಿರೋಧಿಸುವ ಕಾಂಗ್ರೆಸ್, ಸಮಾಜವಾದಿ ಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ‘ವೋಟ್ ಜಿಹಾದಿ’ ಆರೋಪ ಮಾಡಿದ್ದಾರೆ.
ಉತ್ತರ ಪ್ರದೇಶಶದ ಬನ್ಸ್‌ಗಾಂವ್‌ನಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ರ್‍ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್, ಸಮಾಜವಾದಿ ಪಕ್ಷಗಳಿಗೆ ಗಡಿಯಾಚೆಗಿನ ಜಿಹಾದಿಗಳು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿದರು.
ಗಡಿಯಾಚೆಯ ಜಿಹಾದಿಗಳು ಮೈತ್ರಿಕೂಟದ ಗೆಲುವಿಗಾಗಿ ಪ್ರಾರ್ಥನೆ ನಡೆಸುವ ಮೂಲಕ ಗಡಿಯಾಚೆಯಿಂದಲೇ ವೋಟ್ ಜಿಹಾದ್ ನಡೆಸಲಾಗುತ್ತಿದೆ’ ಎಂದರು ದೂರಿದರು.
ತಮ್ಮನ್ನು ವಿರೋಧಿಸುತ್ತಲೇ ಬಂಧಿರುವ ಕಾಂಗ್ರೆಸ್ ನಾಯಕರು ಇದೀಗ ಮತ್ತಷ್ಟು ನಿಂದಿಸುತ್ತಿದ್ದಾರೆ ಎಂದು ದೂರಿದ ಮೋದಿ, ಧರ್ಮ ಆಧಾರಿತ ಮೀಸಲಾತಿಯನ್ನು ವಿರೋಧಿಸುತ್ತಿರುವ ಕಾರಣ ಇಂಡಿಯಾ ಮೈತ್ರಿಕೂಟದ ಜಮಾತ್ ನನ್ನನ್ನು ನಿಂದಿಸುತ್ತಿದೆ ಎಂದರು. ಇದಕ್ಕೆಲ್ಲಾ ಈ ಬಾರಿರ ಲೋಕಸಭಾ ಚುನಾವಣಾ ಫಕಿತಾಂಶವೇ ಉತ್ತರ ಆಗಲಿದೆ ಎಂದರು.