ಬೆಂಗಳೂರು: ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾ (PRCI) ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನೆರವೇರಿದೆ. ಅಧ್ಯಕ್ಷರಾಗಿ ಡಾ. ಟಿ. ವಿನಯ ಕುಮಾರ್ ಅವರು ಆಡಳಿತ ಮಂಡಳಿಯ (ಗವರ್ನಿಂಗ್ ಕೌನ್ಸಿಲ್) ಹಾಗೂ ಮಂಡಳಿಯ ಉಪಾಧ್ಯಕ್ಷರಾಗಿ ಕೆಎಸ್‌ಆರ್‌ಟಿಸಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಲತಾ ಟಿ.ಎಸ್. ಅವರು ಆಡಳಿತ ಪದಗ್ರಹಣ ಮಾಡಿದರು. ಚಿನ್ಮಯೀ ಪ್ರವೀಣ್ ಅವರು ಕಾರ್ಯದರ್ಶಿಯಾಗಿ ಪದಗ್ರಹಣ ಮಾಡಿದರು.

ಬೆಂಗಳೂರು ಜೆ.ಪಿ.ನಗರ ಸಾಂಸ್ಕೃತಿಕ ಸಂಘದಲ್ಲಿ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು. ಸಮಾರಂಭದಲ್ಲಿ ಡಾ. ದೇವಾನಂದ ಗೋಪಾಲ್ (ಡಿಆರ್‌ಡಿಒ ಮಾಜಿ ವಿಜ್ಞಾನಿ) ಮುಖ್ಯ ಅತಿಥಿಯಾಗಿ, ಎಂ.ಬಿ. ಜಯರಾಮ್ (ಚೇರ್ಮನ್ ಎಮೆರಿಟಸ್ ಮತ್ತು ಮುಖ್ಯ ಮಾರ್ಗದರ್ಶಕರು) ಹಾಗೂ ಶ್ರೀಮತಿ ಗೀತಾ ಶಂಕರ್ (ರಾಷ್ಟ್ರೀಯ ಅಧ್ಯಕ್ಷರು) ಭಾಗವಹಿಸಿದ್ದರು.
ಆಡಳಿತ ಮಂಡಳಿಯ ಹೆಚ್ಚುವರಿ ನಿರ್ದೇಶಕರಾಗಿ ಡಾ. ಬಿ.ಕೆ. ರವಿ (ಉಪಕುಲಪತಿ, ಉತ್ತರ ಬೆಂಗಳೂರು ವಿಶ್ವವಿದ್ಯಾಲಯ), ರವೀಂದ್ರನ್, ಸಿ.ಜೆ. ಸಿಂಗ್, ಆರ್.ಎನ್. ಮಹಾಪಾತ್ರ ಹಾಗೂ ಅರಿಜಿತ್ ಸಿಂಗ್ ಅವರು ಜವಾಬ್ದಾರಿ ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಡಾ. ಪ್ರಶಾಂತ್ ವೇಣುಗೋಪಾಲ್ ಅವರು ಯಂಗ್ ಕಮ್ಯುನಿಕೇಟರ್ಸ್ ಕ್ಲಬ್‌ನ ರಾಷ್ಟ್ರೀಯ ಮುಖ್ಯಸ್ಥರಾಗಿ ಹಾಗೂ ಪಶುಪತಿ ಶರ್ಮಾ ಅವರು ಪಿಆರ್‌ಸಿಐಯ ಪ್ರಧಾನ ಕಾರ್ಯದರ್ಶಿಯಾಗಿ ಪದಗ್ರಹಣ ಮಾಡಿದರು



















































