ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಗಾಯಿತ್ರಿ ಭವನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಬಿ.ವೈ.ವಿಜಯೇಂದ್ರರವರನ್ನು ಸನ್ಮಾನಿಸಲಾಯಿತು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಎಸ್.ರಘುನಾಥ್, ಶಾಸಕ ಸಿ.ಕೆ.ರಾಮಮೂರ್ತಿ, ಹಿರಿಯ ಉಪಾಧ್ಯಕ್ಷ ಆರ್.ಲಕ್ಷ್ಮಿಕಾಂತ್, ಖಜಾಂಚಿ ಸುಬ್ಬನರಸಿಂಹ, ಮಾಜಿ ಅಧ್ಯಕ್ಷ ಎಂ.ಆರ್.ವಿ.ಪ್ರಸಾದ್, ಬಿಜೆಪಿ ಮುಖಂಡ ದತ್ತಾತ್ರಿರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ವೈ.ವಿಜಯೇಂದ್ರ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಲ್ಲಿ ಆನೇಕ ಹಿರಿಯರು ಪ್ರಾಮಾಣಿಕ ಸೇವೆಯಿಂದ ಸಮಾಜಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ವಿಪ್ರರ ಅಭಿವೃದ್ದಿಗೆ 100 ಕೋಟಿ ದತ್ತನಿಧಿ ಸಂಗ್ರಹಕ್ಕೆ ಗುರಿ ತಲುಪುವ ವಿಶ್ವಾಸವಿದೆ ಎಂದರು.
ಬಿ.ಎಸ್.ಯಡಿಯೂರಪ್ಪರವರು ಆಡಳಿತದ ಅವಧಿಯಲ್ಲಿ 5ಕೋಟಿ ಅನುದಾನ ನೀಡಿದ್ದರು, ಎಲ್ಲ ಸಮಾಜದ ಧ್ವನಿಯಾಗಿ ಅವರು ಸೇವೆ ಸಲ್ಲಿಸಿದ್ದರು ಎಂದವರು ಹೇಳಿದರು.
ಜಾತಿ ಜನಗಣತಿ: ಕೇಂದ್ರದ ತೀರ್ಮಾನಕ್ಕೆ ಸ್ವಾಗತ:
ಕಾಂಗ್ರೆಸ್ ಪಕ್ಷ ಜಾತಿ, ಜಾತಿ ನಡುವೆ ವಿಷಬೀಜ ಬಿತ್ತುತ್ತಿದೆ ಎಂದು ಆರೋಪಿಸಿದ ವಿಜಯೇಂದ್ರ, ರಾಜ್ಯ ಸರ್ಕಾರಗಳು ಜಾತಿಗಣತಿ ಮಾಡುವ ಅವಕಾಶವಿಲ್ಲ. ಕೇಂದ್ರ ಸರ್ಕಾರ ಮಾತ್ರ ಜಾತಿಗಣತಿ ಮಾಡಲು ಅವಕಾಶವಿದೆ ಎಂದು ಪ್ರತಿಪಾದಿಸಿದರು.
ಎಸ್.ರಘುನಾಥ್ ಮಾತನಾಡಿ ಮಹಾಸಭಾಗೆ ಬಿ.ವೈ.ವಿಜಯೇಂದ್ರರವರು ಗಾಯಿತ್ರಿ ಭವನಕ್ಕೆ ಬಂದಿರುವುದು ಸಂತೋಷದಾಯಕ ಸುದ್ದಿಯಾಗಿದೆ ಎಂದರು. 30 ಸೆಂಟ್ಸ್ ಜಾಗದಲ್ಲಿ ಮಹಿಳಾ ಹಾಸ್ಟಲ್ ನಡೆಯುತ್ತಿದೆ. ಅಲ್ಲಿ ಇನ್ನು ಅಭಿವೃದ್ದಿ ಕೆಲಸವಾಗಬೇಕಾಗಿದೆ . ಅದಕ್ಕೆ ಸಹಕಾರ ನೀಡಬೇಕು ಮತ್ತು ವಿಪ್ರರ ಅಭಿವೃದ್ದಿಗೆ 100ಕೋಟಿ ದತ್ತ ನಿಧಿ ಸಂಗ್ರಹಕ್ಕೆ ಯೋಜನೆ ರೂಪಿಸಲಾಗಿದೆ. ಐದು ವರ್ಷಗಳಲ್ಲಿ ಬ್ರಾಹ್ಮಣ ಶ್ರೇಯೋಭಿವೃದ್ದಿಗಾಗಿ ಶ್ರಮಿಸಲು ವಿಪ್ರ ಮುಖಂಡರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ರಾಜ್ಯ ಬಿಜೆಪಿಯಲ್ಲಿ ಬ್ರಾಹ್ಮಣರು ಕಾರ್ಯಕರ್ತರು ಇದ್ದಾರೆ ಅವರಿಗೆ ರಾಜಕೀಯ ಸ್ಥಾನಮಾನ ನೀಡಬೇಕು ಎಂದು ಅವರು ವಿಜಯೇಂದ್ರರಿಗೆ ಮನವಿ ಸಲ್ಲಿಸಿದರು.
ಬೆಂಗಳೂರುನಗರ ಜಿಲ್ಲಾ ಪ್ರತಿನಿಧಿಗಳಾದ ಎಸ್.ಎಸ್.ಪ್ರಸಾದ್, ಕೆ.ಎನ್.ರವಿಕುಮಾರ್, ದಿಲೀಪ್, ಸತೀಶ್ ಉರಾಳ್, ಪಿ.ಎಸ್.ಪ್ರಕಾಶ್, ರಾಜಶೇಖರ್ ಜಿ.ರಾವ್, ಶ್ರೀನಿವಾಸ್ ರಾಘವನ್ ಉಪಸ್ಥಿತರಿದ್ದರು.