ಅಹಮದಾಬಾದ್: ಗುಜರಾತ್ ರಾಜ್ಯದ ಅಹಮದಾಬಾದ್ ಬಳಿ ಭೀಕರ ವಿಮಾನ ಅಪಘಾತ ಸಂಭವಿಸಿದೆ. ಅಹ್ಮದಾಬಾದ್ ವಿಮಾನ ನಿಲ್ದಾಣದ ಬಳಿಯ ವಿಮಾನ ಪಾತನವಾಗಿದ್ದು, ಬೆಂಕಿ ಹಾಗೂ ದಟ್ಟ ಹೊಗೆ ನೋಡುಗರನ್ನು ಬೆಚ್ಚಿ ಬೀಳಿಸಿದೆ.
Caught On Cam: Passenger plane crashes near Ahmedabad Airport.#PlaneCrash #Gujarat #Ahmedabad #ViralVideo pic.twitter.com/EkitM2Eg9Y
— TIMES NOW (@TimesNow) June 12, 2025
ಅಹ್ಮದಾಬಾದ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ವಿಮಾನ ದುರಂತಕ್ಕೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಆಗಷ್ಟೇ ಟೇಕ್ ಆಫ್ ಆದ ವಿಮಾನದಲ್ಲಿ ಸಂಸದರು ಸೇರಿದಂತೆ 240ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಈ ವಿಮಾನ ದುರಂತದ ವೀಡಿಯೊ ಬೆಚ್ಚಿಬೀಳಿಸುವಂತಿದೆ. ಅಹಮದಾಬಾದಿನಿಂದ ಲಂಡನ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ದುರಂತಕ್ಕೀಡಾಗಿದೆ ಎನ್ನಲಾಗುತ್ತಿದೆ.