ವಿಜಯಪುರ : ಪ್ರಧಾನಿ ನರೇಂದ್ರ ಮೋದಿ ಅವರ ಮಂಡ್ಯ ಭೇಟಿ ಸಂದರ್ಭದಲ್ಲಿ ಹಾಕಲಾಗಿದ್ದ ಉರಿಗೌಡ-ದೊಡ್ಡನಂಜೇಗೌಡರ ಹೆಸರಲ್ಲಿದ್ದ ಸ್ವಾಗತ ಕಮಾನು ಹಾಕಿರುವುದನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಮರ್ಥಿಸಿಕೊಂಡಿದ್ದಾರೆ.
ಆಲಮಟ್ಟಿಯಲ್ಲಿ ಸುದ್ದಿಗಾರರೊಂಸಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ಹಾಕಲಾಗಿದ್ದ ಉರಿಗೌಡ-ನಂಜೇಗೌಡ ಮಹಾದ್ವಾರ ತೆರವು ಮಾಡಿದ್ದು, ಅಕ್ಷಮ್ಯ ಅಪರಾಧ ಎಂದಿದ್ದಾರೆ.
ನರೇಂದ್ರ ಮೋದಿ ಅವರ ಮಂಡ್ಯ ಭೇಟಿ ವೇಳೆ ಉರಿಗೌಡ- ನಂಜೇಗೌಡ ದ್ವಾರ ಹಾಕಿದ್ದು ಸರಿಯಾಗಿದೆ ಎಂದರು. ಅದನ್ನು ತೆರವು ಮಾಡಿದ್ದು ಯಾಕೆಂದು ಗೊತ್ತಿಲ್ಲ ಎಂದ ಸಿ.ಟಿ.ರವಿ, ಮುಂಬರುವ ದಿನಗಳಲ್ಲಿ ಉರಿಗೌಡ-ನಂಜೇಗೌಡ ಹೆಸರಲ್ಲಿ ಶಾಶ್ವತ ದ್ವಾರ ನಿರ್ಮಿಸುವ ಪ್ರಯತ್ನ ಮಾಡಲಾಗುವುದು ಎಂದರು.