ಬೆಂಗಳೂರು: ದೀರ್ಘಕಾಲದಿಂದ ಕೈಗಾರಿಕಾಇಲಾಖೆಯಲ್ಲಿ ಸಾವಿರಾರು ಪ್ರಕರಣಗಳು ಬಾಕಿ ಉಳಿದಿದ್ದು, ಇತ್ಯರ್ಥಪಡಿಸುವ ಸಲುವಾಗಿ ಮತ್ತೆ ‘ಕೈಗಾರಿಕಾ ಅದಾಲತ್’ ಆರಂಭಿಸಲು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಮುಂದಾಗಿದ್ದಾರೆ. ಕೈಗಾರಿಕಾ ಆದಾಲತ್ ಜೊತೆಗೆ ಸಚಿವ ನಿರಾಣಿ ಅವರ ಕನಸಿನ ಕೂಸಾದ ಬಹುನಿರೀಕ್ಷಿತ ‘ಉದ್ಯಮಿಯಾಗು-ಉದ್ಯೋಗ ನೀಡು’ ಯೋಜನೆಗೂ ಚಾಲನೆ ಸಿಗಲಿದೆ.
ಇದರ ಮೊದಲ ಹಂತವಾಗಿ ಬೆಂಗಳೂರಿನಲ್ಲಿಇದೇ ತಿಂಗಳ 27 ರಂದು ಕೈಗಾರಿಕಾ ಆದಾಲತ್ ನಡೆದರೆ, ಮರುದಿನವೇ (28) ರಂದು ಉದ್ಯಮಿಯಾಗು, ಉದ್ಯೋಗ ನೀಡು ಎಂಬ ವಿಶೇಷಕಾರ್ಯಕ್ರಮ ನಡೆಯಲಿದೆ.
ಈ ಹಿಂದೆ 2008 ರಿಂದ 2013 ರಲ್ಲಿ ಬೃಹತ್ ಮತ್ತು ಮಧ್ಯಮಕೈಗಾರಿಕಾ ಸಚಿವರಾಗಿದ್ದ ವೇಳೆ ರಾಜ್ಯದಲ್ಲಿ ಮೊದಲ ಬಾರಿಗೆಕೈಗಾರಿಕಾ ಆದಾಲತ್ ಎಂಬ ‘ಹೊಸ ಪರಿಕಲ್ಪನೆ’ಯನ್ನು ಜಾರಿಗೆತಂದು ಬಹುಪಾಲು ಅದರಲ್ಲಿ ಯಶಸ್ವಿಯಾಗಿದ್ದರು. ಗಣಿ ಮತ್ತುಕಲ್ಲಿದ್ದಲು ಸಚಿವರಾಗಿದ್ದ ವೇಳೆಯೂ ‘ಒಂದೇ ಸೂರಿನಡಿ’ ಅರ್ಜಿಗಳನ್ನು ಇತ್ಯಾರ್ಥಗೊಳಿಸಲು ಜಿಲ್ಲಾ ಮಟ್ಟದಲ್ಲಿ ‘ ಗಣಿಆದಾಲತ್’ ನಡೆಸುವ ಗುರಿ ಇಟ್ಟುಕೊಂಡಿದ್ದರು.
ರಾಜ್ಯಾದ್ಯಾಂತ ಹಲವು ಕೈಗಾರಿಕಾ ವ್ಯಾಜ್ಯಗಳು ಬಹುವರ್ಷಗಳಿಂದ ಬಗೆಹರಿಯದೆ ಉಳಿದಿವೆ. ಇವನ್ನು ದಾವೆದಾರರಸಮಕ್ಷಮದಲ್ಲಿ ಸುಲಭವಾಗಿ ಬಗೆಹರಿಸಿಕೊಳ್ಳಬಹುದು. ಇದರಿಂದ ಕೈಗಾರಿಕೆಗಳ ಸ್ಥಾಪನೆ ಹಾಗೂ ಅಭಿವೃದ್ಧಿಗೆಸಹಾಯಕವಾಗಲಿದೆ
ಎಂಬ ನಿರೀಕ್ಷೆಯನ್ನು ಸಚಿವ ನಿರಾಣಿ ಅವರು ಇಟ್ಟುಕೊಂಡಿದ್ದಾರೆ.
ಕೈಗಾರಿಕಾ ಅದಾಲತ್ ಆರಂಭಿಸುವ ಮೂಲಕ ಆಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸುವುದು ಇದರ ಮೂಲಉದ್ದೇಶವಾಗಿದೆ. ಆದಾಲತ್ ನಡೆಸುವುದರಿಂದ ಶೇ. 75ರಷ್ಟುಸಮಸ್ಯೆಗಳು ಸ್ಥಳೀಯವಾಗಿ ಇತ್ಯರ್ಥವಾಗುತ್ತವೆ. ಇಲಾಖೆಯ ಸಚಿವರಾದ ಬಳಿಕ ಕೈಗಾರಿಕೆಗಳ ಸ್ಥಿತಿಗತಿ ಬಗ್ಗೆಖುದ್ದಾಗಿ ತಿಳಿಯಲು ಸ್ವತಃ ಸಚಿವರೇ ಅನೇಕ ಕಡೆ ಕೈಗಾರಿಕಾಪ್ರದೇಶಗಳಿಗೆ ಭೇಟಿ ನೀಡಿದ್ದರು. ಬಿಡದಿ, ಹಾರೋಹಳ್ಳಿ, ಜಿಗಣಿ, ದಾಬಸ್ ಪೇಟೆ, ತುಮಕೂರಿನ ವಸಂತನರಸಪುರದಲ್ಲಿರುವ ಆಹಾರ ಸಂಸ್ಕರಣ ಘಟಕ ಸೇರಿದಂತೆ ಜಿಲ್ಲಾ ಕೇಂದ್ರಗಳಿಗೆ ಭೇಟಿನೀಡಿದಾಗ ಬಾಕಿ ಇರುವ ಪ್ರಕರಣಗಳ ಬಗ್ಗೆ ದೂರುಗಳು ಕೇಳಿಬಂದಿದ್ದವು.
ತಕ್ಷಣವೇ ವಾಣಿಜ್ಯ ಮತ್ತು ಕೈಗಾರಿಕೆ, ಹೆಚ್ಚುವರಿ ಮುಖ್ಯಕಾರ್ಯದರ್ಶಿ ಇ.ವಿ.ರಮಣರೆಡ್ಡಿ, ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ ಮತ್ತು ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿದೇರ್ಶಕ ಎಚ್‌ಎಂ ರೇವಣ್ಣ ಗೌಡ,
ಸೇರಿದಂತೆ ಹಲವು ಅಧಿಕಾರಿಗಳ ಜೊತೆ ಸುದೀರ್ಘ ಸಭೆನಡೆಸಿದ ಅವರು ಹಲವು ವರ್ಷಗಳಿಂದ ಬಾಕಿ ಇರುವಪ್ರಕರಣಗಳನ್ನು ಇತ್ಯರ್ಥಪಡಿಸಲು ಕೂಡಲೇಕಾರ್ಯನ್ಮೋಖರಸಗಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ಬೆಂಗಳೂರು ಹೊರತುಪಡಿಸಿ ಎರಡನೇ ಹಂತದ ನಗರಗಳಲ್ಲಿಬೃಹತ್ ಕೈಗಾರಿಕೆಗಳನ್ನು ಆರಂಭಿಸಲು ಮುಂದೆ ಬರುವ ಕೈಗಾರಿಕೋದ್ಯಮಿಗಳಿಗೆ ಹೆಚ್ಚಿನ ಪ್ರೋತ್ಸಾಹಧನ ಮತ್ತು ಇತರೆಸೌಲಭ್ಯಗಳನ್ನು ನೀಡಲು ಸಚಿವ ನಿರಾಣಿ ತೀರ್ಮಾನಿಸಿದ್ದಾರೆ.
ವಿಚಾರ ಸಂಕಿರಣ ಹಾಗೂ ಕಾರ್ಯಾಗಾರ
ಯುವಕರಲ್ಲಿ ಉದ್ಯಮಶೀಲತೆಯ ಮನೋಭಾವವನ್ನು ಉತ್ತೇಜಿಸಲು ರಾಜ್ಯಾದ್ಯಂತ ಪ್ರಮುಖ ನಗರಗಳಲ್ಲಿ ವಿಚಾರ ಸಂಕಿರಣ ಮತ್ತುಕಾರ್ಯಾಗಾರಗಳನ್ನು ನಡೆಸಲಿದ್ದಾರೆ. ಯುವಕರು ಉದ್ಯಮಿಗಳಾಗಲು ಪ್ರೋತ್ಸಾಹಿಸಲು ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ ಮತ್ತುಕಲಬುರಗಿಯಂತಹ ನಗರಗಳಲ್ಲಿ ನಿಗದಿತ ಕೈಗಾರಿಕಾ ಅದಾಲತ್‌ಗಳ ಒಂದು ದಿನದ ನಂತರ ಕಾರ್ಯಾಗಾರಗಳುನಡೆಯಲಿವೆ.
ಅನೇಕ ಕೈಗಾರಿಕೋದ್ಯಮಿಗಳು ಹಾಗೂ ಸಂಘ ಸಂಸ್ಥೆಗಳು ಸಚಿವ ನಿರಾಣಿ ಅವರ ಕೈಗಾರಿಕಾ ಅದಾಲತ್‌ಗಳು ಮತ್ತುಉದಯೋನ್ಮುಖ ಉದ್ಯಮಿಗಳಿಗೆ ನಡೆಸಲು ಉದ್ದೇಶಿಸಿರುವ ಕಾರ್ಯಾಗಾರಗಳಿಗೆ ಮೆಚ್ಚುಗೆ ಸೂಚಿಸಿವೆ.
ಹೆಚ್ಚಿನ ವ್ಯಾಪಾರ ವಹಿವಾಟು, ಉದ್ಯಮಿ ಸ್ನೇಹಿ ವಾತಾವರಣವನ್ನು ಸೃಷ್ಟಿಸುತ್ತದೆ.ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸುವುದರ ಜೊತೆಗೆ ರಾಜ್ಯದಲ್ಲಿ ಕೈಗಾರಿಕಾ ಮತ್ತು ಆರ್ಥಿಕ ಬೆಳವಣಿಗೆಯನ್ನುಮತ್ತಷ್ಟು ಉತ್ತೇಜಿಸುತ್ತದೆ ಎನ್ನುವುದು ಬಹುತೇಕ ಉದ್ಯಮಿಗಳ ಅಭಿಪ್ರಾಯವಾಗಿದೆ. ಹೀಗಾಗಿ ಇದನ್ನು ಆಯೋಜಿಸಲಾಗಿದೆ.