ಸೂಪರ್ ಸ್ಟಾರ್ ಮಮ್ಮುಟ್ಟಿ ಅಭಿನಯದ ಬಹು ನಿರೀಕ್ಷಿತ ‘ಟರ್ಬೋ’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಮೇ.23 ರಂದು ಸಿನಿಮಾ ತೆರೆ ಕಾಣಲು ಸಿದ್ದವಾಗಿರುವ ಈ ಮಲಯಾಳಂ ಸಿನಿಮಾದಲ್ಲಿ ಕನ್ನಡದ ಖ್ಯಾತ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ತೆರೆ ಹಂಚಿಕೊಂಡಿದ್ದಾರೆ.
ತೆಲುಗು ನಟ ಸುನಿಲ್, ಅಂಜನಾ ಜಯಪ್ರಕಾಶ್, ಕಬೀರ್ ದುಹಾನ್ ಸಿಂಗ್, ಸಿದ್ದಿಕ್, ಶಬರೀಶ್ ವರ್ಮಾ, ದಿಲೀಶ್ ಪೋತನ್ ಕೂಡಾ ನಟಿಸಿದ್ದಾರೆ.
ವಿಲನ್ ಅವತಾರದಲ್ಲಿ ಕಾಣಿಸಿಕೊಳ್ಳುವ ರಾಜ್ ಬಿ ಶೆಟ್ಟಿ ಲುಂಗಿ ತೊಟ್ಟು ಲೋಕಲ್ ಡಾನ್ ನಂತೆ ಅಭಿನಯಿಸಿರುವ ವೈಖರಿ ಟ್ರೈಲರ್ ಗೆ ಆಕರ್ಷಣೆ ತುಂಬಿದೆ. ಸಾಮಾಜಿಕ ಜಾಲತಾಣಗಳಲ್ಲಿ ಟ್ರೇಲರ್ ಸಂಚಲನ ಸೃಷ್ಟಿಸಿದ್ದು, ಎರಡೇ ದಿನಗಳಲ್ಲಿ ೩೦ ಲಕ್ಷ ಜನರ ಮೆಚ್ಚುಗೆ ಗಳಿಸಿದೆ.