ಬೆಂಗಳೂರು: KSRTC ಸಹಿತ ಸಾರಿಗೆ ನಿಗಮಗಳ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಮೊದಲ ಆದ್ಯತೆ ನೀಡಿರುವ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಇದೀಗ BMTC ನೌಕರರ ಪರವಾಗಿ ಆಶಾದಾಯಕ ನಡೆ ಅನುಸರಿಸಿದ್ದಾರೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ನಿಗಮದ ನೌಕರರ ಸೇವಾಗ್ರಹ ಕುರಿತಂತೆ ಸಾರಿಗೆ ಸಚಿವರು ಮಹತ್ವದ ನಿರ್ದೇಶನ ನೀಡಿ ಕ್ಷಿಪ್ರ ಕ್ರಮಕ್ಕೆ ಸಾಕ್ಷಿಯಾಗಿದ್ದಾರೆ. ಈ ಬಗ್ಗೆ ಕಾರ್ಮಿಕ ಸಂಘಟನೆ CITU ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಂಡಿದೆ. ಸಾರಿಗೆ ಸಚಿವರು ಮುಖ್ಯ ಸಂಚಾರ ವ್ಯವಸ್ಥಾಪಕರಿಗೆ ಅಂತರ್ ನಿಗಮ ವರ್ಗಾವಣೆಗೊಂಡಿದ್ದ 167 ನೌಕರರಿಗೆ ಸೇವಾಗ್ರಹಗೊಳಿಸಿ ಆದೇಶ ನೀಡುವಂತೆ 30.01.2024ರಂದು ನಿರ್ದೇಶನ ನೀಡಿದರು. ಅದರಂತೆ ಇಂದೇ ಆದೇಶ ಮಾಡಲಾಗಿದೆ ಎಂದು CITU ಫೆಡರೇಷನ್ ಪ್ರಮುಖರು ತಿಸಿದ್ದಾರೆ.
ಸಾರಿಗೆ ಸಂಸ್ಥೆಯಲ್ಲಿ ವರ್ಗಾವಣೆಗೊಂಡ ಅನೇಕೆರು ಇನ್ನೂ ಬಿಡುಗಡೆಯಾಗಿಲ್ಲ. ವರ್ಗಾವಣೆಗೊಂಡು ರಿಲೀವ್ ಆಗದೆ ಇರುವುದರಿಂದ ಆ ಕಾರ್ಮಿಕ ಆಗುತ್ತಿದ್ದ ಅನಾನುಕೂಲ ಬಗ್ಗೆ CITU ಫೆಡರೇಷನ್ ನಿಯೋಗ ಸಚಿವರ ಗಮನಸೆಳೆದಿದೆ. ಅದಾಗಲೇ ಸಾರಿಗೆ ಸಚಿವರು BMTC – CTM ರವರಿಗೆ ಮಾತನಾಡಿ ಈ ನೌಕರರನ್ನು ಬಿಡುಗಡೆಗೊಳಿಸುವಂತೆ ನಿರ್ದೇಶನ ನೀಡಿದ್ದಾರೆ.