ತಿರುಚಿರಾಪಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ನಡೆಸಿದ ರೋಡ್ ಶೋ ನಾಡಿನ ಗಮನಸೆಳೆಯಿತು.
ಮೋದಿಯವರನ್ನು ಕಣ್ತುಂಬಿಕೊಳ್ಳಲು ತಿರುಚಿರಾಪಳ್ಳಿಯ ರಸ್ತೆಗಳ ಇಕ್ಕೆಲಗಳಲ್ಲಿ ಸಾವಿರಾರು ಜನರು ಜಮಾಯಿಸಿದ್ದರು. ಇಳಿವಯಸ್ಸಿನ ಹಿರಿಯರು ಮೋದಿಯವರನ್ನು ಆಶೀರ್ವದಿಸಿದ ದೃಶ್ಯವೊಂದು ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ವಿವಿಧ ದೇಗುಲಗಳ ಪುರೋಹಿತರ ಸಮೂಹ ಕೂಡಾ ಮೋದಿಯವರ ರೋಡ್ ಶೋ ಸಾಕ್ಷೀಕರಿಸಿ ಸಂತಸಪಟ್ಟರು. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ತಮ್ಮ ಮೆಚ್ಚಿನ ಪ್ರಧಾನಿ ಶ್ರೀ @narendramodi ಅವರನ್ನು ಕಣ್ತುಂಬಿಕೊಳ್ಳಲು, ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ಮೋದಿಯವರ ರೋಡ್‌ಶೋನಲ್ಲಿ ರಸ್ತೆಯುದ್ದಕ್ಕೂ ನೆರೆದಿದ್ದ ಜನಸ್ತೋಮದ ಸಂಭ್ರಮದ ದೃಶ್ಯಗಳು. pic.twitter.com/jM8H7JbU92
— Nalinkumar Kateel (@nalinkateel) January 20, 2024

























































