ಬೆಂಗಳೂರು: ಗಣರಾಜ್ಯೋತ್ಸವ ಪರೇಡ್ ಸಂಬಂಧದ ಟ್ಯಾಬ್ಲೋ ಬಗ್ಗೆ ಕಾಂಗ್ರೆಸ್ ಅನಗತ್ಯ ವಿವಾದ ಹುಟ್ಟುಹಾಕಿದೆ ಎಂದಿರಿರುವ ಬಿಜೆಪಿ, ಕರ್ನಾಟಕದ ಟ್ಯಾಬ್ಲೋ ಬರಬೇಕು ಎಂದು ತಮ್ಮ ಪಕ್ಷವೂ ಕೇಂದ್ರಕ್ಕೆ ಮನವಿ ಮಾಡುತ್ತದೆ ಎಂದಿದೆ.
ಈ ಕುರಿತಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಬಿಜೆಪಿ ನಾಯಕ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಜನವರಿ 26 ರಂದು ನಡೆಯುವ ಗಣರಾಜ್ಯೋತ್ಸವ ಪಥ ಸಂಚಲನಕ್ಕೆ ಕರ್ನಾಟಕದ ಟ್ಯಾಬ್ಲೋ ಆಯ್ಕೆಯಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿನಾ ಕಾರಾಣ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಹಿಂದೆ ನಮ್ಮ ಸರ್ಕಾರ ಇದ್ದಾಗ ಕೇಂದ್ರದ ರಕ್ಷಣಾ ಸಚಿವರಿಗೆ ಮಾತನಾಡಿ ಮತ್ತೆ ಟ್ಯಾಬ್ಲೋ ಬರುವಂತೆ ಮಾಡಿದ್ದೆವು. ಆ ಪ್ರಯತ್ನ ಸಿಎಂ ಮಾಡಬೇಕು. ಅದನ್ನು ಬಿಟ್ಟು ಕೇಂದ್ರದ ಮೇಲೆ ಆರೋಪ ಮಾಡುತ್ರಿದ್ದಾರೆ ಎಂದವರು ದೂರಿದರು.
2018ರಲ್ಲಿ ಇವರು ಆಡಳಿತದಲ್ಲಿ ಇದ್ದಾಗ ಆಗಲೂ ಆಯ್ಕೆ ಆಗಿರಲಿಲ್ಲ. ಇವರು ಸುಮ್ಮನೆ ಜನರನ್ನು ಕೆರಳಿಸುವಂತೆ ಮಾಡುತ್ತಿದ್ದಾರೆ. ನಾವು ಕೂಡ ಕರ್ನಾಟಕದ ಟ್ಯಾಬ್ಲೋ ಬರಬೇಕು ಅಂತ ಮನವಿ ಕೇಂದ್ರಕ್ಕೆ ಮನವಿ ಮಾಡುತ್ತೇವೆ ಎಂದು ಬೊಮ್ಮಾಯಿ ಹೇಳಿದರು.

















































