ನವದೆಹಲಿ; ಇದು ನಿಜಕ್ಕೂ ರೋಮಾಂಚಕಾರಿ ದೃಶ್ಯ. ಚಲಿಸುತ್ತಿದ್ದ ಲಾರಿಯಿಂದ ಖದೀಮ ಕಳ್ಳರು ಸರಕುಗಳನ್ನು ಕದಿಯುತ್ತಿದ್ದ ವೈಖರಿ ಬೆಚ್ಚಿಬೀಳಿಸುವಂತಿದೆ.
ये वीडियो आगरा-मुंबई नेशनल हाईवे पर मध्यप्रदेश में शाजापुर जिले की है। बाइक सवार 3 चोर चलते ट्रक से सामान चुरा रहे हैं। हालांकि इस घटना में ऐसा भी लगता है, जैसे ट्रक ड्राइवर की मिलीभगत हो। चोरी होने तक ट्रक साइड चलता रहा। चोरी पूरी होते ही ट्रक की साइड बदल गई… pic.twitter.com/FfhIZHpJps
— Sachin Gupta (@SachinGuptaUP) May 25, 2024
ಸರಕು ತುಂಬಿದ ಲಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗಲೇ ಬೈಕ್ ಸವಾರರು ಲಾರಿಯನ್ನು ಏರಿ, ಅದರಲ್ಲಿದ್ದ ಸರಕುಗಳನ್ನು ರಸ್ತೆಗೆ ಎಸೆದಿದ್ದಾರೆ. ಒಂದಷ್ಟು ದೂರ ಸಾಗಿದ ನಂತರ, ಮತ್ತದೇ ಬೈಕ್ ಮೇಲೆ ಇಳಿಯುತ್ತಾರೆ. ಲಾರಿಯ ವೇಗಕ್ಕೆ ತಕ್ಕಂತೆಯೇ ಬೈಕ್ ಸವಾರ ಕೂಡಾ ತನ್ನ ದ್ವಿಚಕ್ರ ವಾಹನವನ್ನು ಚಲಾಯಿಸಿ, ಚಲಿಸುತ್ತಿದ್ದ ಲಾರಿಯಿಂದ ತನ್ನ ಸಹಚರರನ್ನು ಇಳಿಸುತ್ತಾನೆ. .
ಆಗ್ರಾ-ಮುಂಬೈ ಹೆದ್ದಾರಿಯಲ್ಲಿ ದೇವಾಸ್-ಶಾಜಾಪುರ ಮಾರ್ಗದ ನಡುವೆ ನಡೆದಿದೆ ಎನ್ನಲಾದ ಈ ಕಳ್ಳತನದ ವೀಡಿಯೋ ಬೇರೊಂದು ವಾಹನದ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.