ಶಿವಮೊಗ್ಗ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕುಟುಂಬಕ್ಕೆ ಸೆಡ್ಡು ಹೊಡೆದು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿರುವ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರನ್ನು ಬಿಜೆಪಿ 6 ವರ್ಷ ಕಾಲ ಉಚ್ಚಾಟಿಸಿದೆ. ಇದೇ ವೇಳೆ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅವರಿಗೆ ಚುನಾವಣಾ ಆಯೋಗ ರೈತನ ಚಿಹ್ನೆ ನೀಡಿದೆ.
ನಾಮಪತ್ರ ವಾಪಸ್ ಪಡೆಯದೆ ಕಣದಲ್ಲಿ ಉಳಿದಿರುವ ಈಶ್ವರಪ್ಪ ಅವರಿಗೆ ಆಯೋಗವು ‘ಕಬ್ಬಿನ ಜೊತೆ ಕೈ ಕಟ್ಟಿಕೊಂಡ ನಿಂತ ರೈತ’ನ ಚಿಹ್ನೆಯನ್ನು ನೀಡಿದೆ.
















































