(ವರದಿ: ರವಿಕುಮಾರ ಜೆ.ಓ. ತಾಳಿಕೆರೆ)
ದಾವಣಗೆರೆ: ಜಗಳೂರು ತಾಲೂಕಿನ ಬಿಳಿಚೋಡು ಗ್ರಾಮದ ಹೊರವಲಯದಲ್ಲಿ ಮಲ್ಪೆ ಟು ಮೊಳಕಾಲ್ಮೂರು ರಾಜ್ಯ ಹೆದ್ದಾರಿಯವ ಜಗಳೂರು ಮಾರ್ಗದ ಹಾಗೂ ಕೆರೆಯ ಪಕ್ಕದ ತಿರುವಿನಲ್ಲಿರುವ ವಿಘ್ನೇಶ್ವರನ ಮುಚ್ಚು ದೇಗುಲವಿದ್ದು ಇದು ಬಹಳ ಅಪರೂಪದ ದೇವಗುಲವಾಗಿದೆ
ಇದು ದ್ವಾರ ರಹಿತ ದೇಗುಲ. ಸಾಮಾನ್ಯವಾಗಿ ಎಲ್ಲಾ ದೇವಾಲಯಗಳಿಗೆ ಬಾಗಿಲು ಇರುವುದು ಸಾಮಾನ್ಯ ಆದರೆ ಈ ದೇವಾಲಯಕ್ಕೆ ಬಾಗಿಲು ಇಲ್ಲದಿರುವುದೇ ವಿಶೇಷ.

ದೇಗುಲದ ಗರ್ಭಗುಡಿಯಲ್ಲಿ ಎರಡು ಈಶ್ವರನ ಪಾಣಿ ಪೀಠಗಳಿದ್ದು ಒಂದು ಪಾಣಿ ಪೀಠದಲ್ಲಿ ಈಶ್ವರನ ಲಿಂಗ ಮತ್ತೊಂದು ಪಾಣಿ ಪೀಠದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆಗೊಂಡಿದೆ. ಈ ದೇವಾಲಯವು ಚಿತ್ರದುರ್ಗ ಪಾಳೆಗಾರರ ಕಾಲದ ದಳವಾಯಿ ಮುದ್ದಣ್ಣನ ಕಾಲದಲ್ಲಿ ನಿರ್ಮಾಣಗೊಂಡಿದೆ ಎನ್ನಲಾಗುತ್ತಿದೆ. ಕೊಣಚಗಲ್ ಗುಡ್ಡದ ಕೆಳಗೆ ಮುಚ್ಚು ದೇಗುಲವಿದ್ದು ಇವರ ಕಾಲದಲ್ಲಿಯೇ ತಾಲೂಕಿನಲ್ಲಿ ಎರಡು ಮೂರು ಮುಚ್ಚು ದೇವಾಲಯಗಳು ನಿರ್ಮಾಣವಾಗಿವೆ.
ಈ ಅನನ್ಯ ದೇಗುಲವು ಅಳಿವಿನಂಚಿನಲ್ಲಿದೆ. ಸಂಪೂರ್ಣ ನಾಶವಾಗುವ ಮುನ್ನ, ಪಾಳೇಗಾರರ ಕಾಲದ ಈ ದೇಗುಲವನ್ನು ಉಳಿಸಿ ಬೆಳೆಸಬೇಕಾಗಿದೆ. ರಾಜ್ಯ ಹೆದ್ದಾರಿಯ ಪಕ್ಕದಲ್ಲಿದ್ದರೂ ಇದು ಮುಜಾರಾಯಿ ಇಲಾಖೆಯ ಕಣ್ಣಿಗೆ ಕಾಣದೆ ಇರುವುದು ವಿಪರ್ಯಸದ ಸಂಗತಿಯಾಗಿದೆ. ದಾವಣಗೆರೆಯಿಂದ ಜಗಳೂರಿಗೆ ಜಿಲ್ಲಾಧಿಕಾರಿಗಳು ಸೇರಿದಂತೆ ಸಚಿವರು , ಸಂಸದರು, ಶಾಸಕರು ನಿತ್ಯ ಇದೇ ದಾರಿಯಲ್ಲಿ ಓಡಾಡುತ್ತಿದ್ದರೂ ಅವರ ಕಣ್ಣಿಗೆ ಬಿಳದೇ ಇರುವುದು ವಿಪರ್ಯಸ ಎನ್ನುತ್ತಿದ್ದಾರೆ ಊರ ನಾಗರಿಕರು.
ಸದ್ಯ ಗ್ರಾಮದ ಆಸಕ್ತ ಭಕ್ತರೊಬ್ಬರು ಈ ವಿಘ್ನೇಶ್ವರನ ಸನ್ನಿಧಿಗೆ ಪ್ರತಿ ನಿತ್ಯ ಪೂಜೆ ಕೈಂಕರ್ಯ ನೆರವೇರಿಸುತ್ತಿದ್ದರೆ. ಇದು ಒಬ್ಬರು ನೆರವೇರಿಸುವ ಪೂಜೆಗೆ ಸೀಮಿತವಾಗದೆ, ದೇವಾಲಯವು ಸಮಸ್ತ ಸಮಾಜಕ್ಕೆ ವಾರ ನೀಡುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಬೇಕಿದೆ ಎಂದು ಸ್ಥಳೀಯ ಸಾಮಾಜಿಕ ಹೊರಾಟಗಾರ ರಾಘವೇಂದ್ರ ಪ್ರತಿಪಾದಿಸಿದ್ದಾರೆ.





















































