ಹೈದರಾಬಾದ್: ಖ್ಯಾತ ಸಿನಿಮಾ ನಿರ್ದೇಶಕ ಕೆ. ವಾಸು ಅವರು ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೈದರಾಬಾದ್‌ನ ಕಿಮ್ಸ್ ಆಸ್ಪತ್ರೆಯಲ್ಲಿ ಶುಕ್ರವಾರ ಕೊನೆಯುಸಿರೆಳೆದರು.
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರ ಆರೋಗ್ಯ ಕೆಲ ದಿನಗಳಿಂದ ತುಂಬಾ ಹದಗೆಟ್ಟಿತ್ತು. ಚಿಕಿತ್ಸೆಗೆ ಸ್ಪಂಧಿಸದ ವಾಸು ಅವರು ಶುಕ್ರವಾರ ಕೊನೆಯುಸಿರೆಳೆದರು ಎಂದು ಕುಟುಂಬ್ ಮೂಲಗಳು ತಿಳಿಸಿವೆ.
ಮೆಗಾಸ್ಟಾರ್ ಚಿರಂಜೀವಿ ಅವರ ‘ಪ್ರಣಾಮ್ ಖರೀದು’ ಚಿತ್ರವನ್ನು ವಾಸು ನಿರ್ದೇಶಿಸಿದ್ದರು. ಕನ್ನಡದಲ್ಲಿ ಜಗ್ಗೇಶ್ ನಟನೆಯ ಸರ್ವರ್ ಸೋಮಣ್ಣ ಸಿನಿಮಾವನ್ನೂ ಕೆ. ವಾಸು ನಿರ್ದೇಶನ ಮಾಡಿದ್ದರು.
ವಾಸು ಅವರ ನಿಧನಕ್ಕೆ ಚಿತ್ರರಂಗದ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.
ನನ್ನಜೊತೆ #ಸರ್ವರ್ ಸೋಮಣ್ಣ ಚಿತ್ರ ಮಾಡಲೆಬೇಕು
ಎಂದು 1992ರಲ್ಲಿ ಪ್ರೀತಿಯಿಂದ ಬಂದ ತೆಲುಗಿನ ನಿರ್ದೇಶಕ ಕೆ.ವಾಸು..ನಟನೆಗೆ ಅವಕಾಶ ಕೇಳುವ ಸನ್ನವೇಶಕ್ಕೆ ಎದ್ದು ನಿಂತು ಚಪ್ಪಾಳೆ ಹೊಡೆದು ಬೆನ್ನು ತಟ್ಟಿದ್ದರು.
ಇವರ ನಿರ್ಮಾಪಕ ನನ್ನಜೊತೆ ಖಳನಟನಾಗಿ #ರೌಡಿmla ಯಲ್ಲಿ ನಟಿಸಿದ್ದವರು.ಸೌಮ್ಯ ಸ್ವಭಾವದ ನಿರ್ದೇಶಕರು..ಅವರ ಆತ್ಮಕ್ಕೆ ಶಾಂತಿ🙏 https://t.co/GyD5fqX03Q— ನವರಸನಾಯಕ ಜಗ್ಗೇಶ್(modi ka parivar) (@Jaggesh2) May 27, 2023























































