ಬೆಂಗಳೂರು: ಕಬ್ಬಿಗೆ ನ್ಯಾಯಯುತ ದರ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಸುತ್ತಿರುವ ಅಹೋರಾತ್ರಿ ಸತ್ಯಾಗ್ರಹ ಮುಂದುವರಿದಿದೆ. ರೈತರನ್ನು ಸಮಾಧಾನಪಡಿಸುವ ಪ್ರಯತ್ಸ ಸರ್ಕಾರದ ಕಡೆಯಿಂದ ಸಾಗಿದ್ದು, ಸೋಮವಾರ ನಡೆದ ಸಭೆ ಕುತೂಹಲದ ಕೇಂದ್ರಬಿಂದುವಾಯಿತು.
ಸೋಮವಾರದ ಕಬ್ಬು ಖರೀದಿ ಮಂಡಳಿ ಸಭೆಯಲ್ಲಿ ಸಕ್ರೆ ಸಚಿವರು ಕಬ್ಬಿನ ಉಪಉತ್ಪನ್ನಗಳಿಂದ ಟನ್ ಕಬ್ಬಿಗೆ 126ರೂ ಲಾಭ ಬರುತ್ತದೆ ಅದರಲ್ಲಿ ಮೊದಲನೇ ಕಂತಾಗಿ ರೈತರಿಗೆ ಎಪ್ ಆರ್ ಪಿ ಗೆ ಹೆಚ್ಚುವರಿಯಾಗಿ 50 ರೂ ನೀಡುವಂತೆ ಕಾರ್ಖಾನೆಗಳಿಗೆ ಆದೇಶ ಹೊರಡಿಸುವುದಾಗಿ ಸಕ್ಕರೆ ಸಚಿವ ಮುನೇನಕೊಪ್ಪ ಕಬ್ಬು ನಿಯಂತ್ರಣ ಮಂಡಳಿ ಸಭೆಯಲ್ಲಿ ತಿಳಿಸಿದರು. ಸರ್ಕಾರದ ನಿಲುವನ್ನು ರಾಜ್ಯ ಕಬ್ಬು ಬೆಳಗಾರರ ಸಂಘದ ಅಧ್ಯಕ್ಷ ಕುರುಬುರ್ ಶಾಂತಕುಮಾರ್ ತಿರಸ್ಕಾರ ಮಾಡಿ ಚಳುವಳಿ ಮುಂದುವರಿಯುತ್ತದೆ ಎಂದು ತಿಳಿಸಿದರು. ನಂತರ ಸಚಿವರು ಮಂಗಳವಾರ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳ ಕೈಗೊಳ್ಳೋಣ ಎಂದು ತಿಳಿಸಿದರು
ಸಕ್ಕರೆ ಕಾರ್ಖಾನೆಗಳು ಯೆಥನಾಲ್ ಉತ್ಪಾದನೆಗೆ ಪ್ರೋತ್ಸಾಹಧನ, ಕಡಿಮೆ ಬಡ್ಡಿ ಸಾಲ, ಎಥೆನಾಲ್ ಖಚಿತ ಖರೀದಿ ಬರವಸೆ, ತೆರಿಗೆ ವಿನಾಯಿತಿ, ವಿದ್ಯುತ್ ಖರೀದಿ ಭರವಸೆ,ಕಡಿಮೆ ಬಡ್ಡಿ ಧನಸಹಾಯ, ಸಕ್ಕರೆ ರಪ್ತು ಪ್ರೋತ್ಸಾಹದ, ಇನ್ನಿತರ ಸವಲತ್ತುಗಳನ್ನು ಸರ್ಕಾರದಿಂದ ಪಡೆದು, ಸರ್ಕಾರದ ಆದೇಶಗಳನ್ನು ಪಾಲಿಸಬೇಕು. ಸಕ್ಕರೆ ಕಾರ್ಖಾನೆಗಳು ಕಟಾವ್ ಕೂಲಿ ಸಾಗಾಣಿಕೆ ವೆಚ್ಚವನ್ನು 250 ರಿಂದ 300 ಏರಿಕೆ ಮಾಡಿದ್ದಾರೆ ಈ ವೆಚ್ಚವನ್ನು ಕಡಿಮೆ ಮಾಡಿದರೆ ಟನಗೆ ರೈತರಿಗೆ 150 -200 ಉಳಿಯಬಹುದು ಈ ದಿಕ್ಕಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ಕುರುಬೂರು ಶಾಂತಕುಮಾರ್ ಒತ್ತಾಯಿಸಿದೆರು.
ಉತ್ತರ ಪ್ರದೇಶ್, ಪಂಜಾಬ್, ಹರಿಯಾಣ , ತಮಿಳುನಾಡು ತೆಲಂಗಾಣ ರಾಜ್ಯಗಳಲ್ಲೂ ಹೆಚ್ಚುವರಿ ರಾಜ್ಯ ಸಲಹಾ ಬೆಲೆ ನಿಗದಿ ಮಾಡಿದ್ದಾರೆ, ಅದನ್ನು ಗಮನಿಸಿ ಹೆಚ್ಚುವರಿ ಬೆಲೆ ನಿಗದಿಮಾಡಲಿ, ಸಕ್ಕರೆ ಇಳುವವರಿಯಲ್ಲಿ ಮೋಸ ತಪ್ಪಿಸಿದರೆ ರೈತರಿಗೆ ಶೇಕಡ ಒಂದು ಇಳುವರಿಗೆ 300 ಹೆಚ್ಚಳವಾಗುತ್ತದೆ ಎಲ್ಲವನ್ನು ಸರ್ಕಾರ ಗಮನಿಸಿ ತೀರ್ಮಾನ ಮಾಡಿ ಎಂದು ಸಚಿವರಿಗೆ ತಿಳಿಸಿದರು. ಧರಣಿ ಮುಂದುವರಿಯುತ್ತದೆ, ಎಂದು ಸ್ಪಷ್ಟಪಡಿಸಿದರು.
ಸೋಮವಾರದ ಸಭೆಯಲ್ಲಿ ಕಬ್ಬು ಖರೀದಿ ಮಂಡಳಿ ಸದಸ್ಯರು, ಕೈಗಾರಿಕ ಇಲಾಖೆ ಕಾರ್ಯದರ್ಶಿ, ಪಂಕಜ್ ಕುಮಾರ್ ಪಾಂಡೆ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಆಯುಕ್ತ ಶಿವಾನಂದ ಕೆಲ್ಕರಿ ಮುಂತಾದವರಿದ್ದರು