ರಾಜ್ಯ ಕಬ್ಬು ಬೆಳೆಗಾರ ಸಂಘದ ರೈತರ ಅಹೋರಾತ್ರಿ ಸತ್ಯಾಗ್ರಹ..13ನೇ ದಿನದ ಧರಣಿ ವೇಳೆಯೂ ಆಕ್ರೋಶ.. ಬಿಕ್ಕಟ್ಟು ಹಿನ್ನಲೆ ಎಚ್ಚೆತ್ತ ಸರ್ಕಾರ.. ಡಿ.5ರಂದು ಕಬ್ಬು ಖರೀದಿ ಮಂಡಳಿ ಸಭೆ ಕರೆದ ರಾಜ್ಯ ಸರ್ಕಾರ..
ಬೆಂಗಳೂರು: ಕಬ್ಬು ಎಫ್‌ಆರ್‌ಪಿ ದರ ಎರಿಕೆ, ರಾಜ್ಯ ಸಲಹಾ ಬೆಲೆ ನಿಗದಿ, ಕಬ್ಬಿನಿಂದ ಬರುವ ಇತರೆ ಉತ್ಪನ್ನಗಳ ಲಾಭ ಹಂಚಿಕೆ ಮಾಡಿ ,ಕಬ್ಬು ಕಟಾವು ಸಾಗಾಣಿಕೆ ವೆಚ್ಚ ಲಗಾಣಿ ಸುಲಿಗೆ ತಪ್ಪಿಸಿ, ಕಬ್ಬಿನ ತೂಕದಲ್ಲಿ ಮೋಸ, ಸಕ್ಕರೆ ಇಳುವರಿಯಲ್ಲಿ ಮೋಸ ತಪ್ಪಿಸಿ ಎಂದು 13 ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿರುವ ರಾಜ್ಯ ಕಬ್ಬು ಬೆಳೆಗಾರರ ಸಂಘದ ಹೋರಾಟ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಸೋಮವಾರ (ಡಿ.5) ಸರ್ಕಾರವು ಸಕ್ಕರೆ ಸಚಿವರ ಅಧ್ಯಕ್ಷತೆಯಲ್ಲಿ ಕಬ್ಬು ಖರೀದಿ ಮಂಡಳಿ ಸಭೆ ಕರೆದಿದೆ,
ರೈತ ಮುಖಂಡರನ್ನು ಬಂಧಿಸಿ ರಾತ್ರಿ ಬಿಡುಗಡೆ ಗೊಳಿಸಿದ್ದ ಪೊಲೀಸರು ಹೋರಾಟಗಾರರನ್ನು ಸಮಾಧಾನ ಪಡಿಸಿ ಮುಖ್ಯಮಂತ್ರಿ ಜೊತೆ ಚರ್ಚೆಗೆ ಅವಕಾಶ ಕಲ್ಪಿಸುವ ಭರವಸೆ ನೀಡಿದ್ದರು. ಆದರೆ ಭರವಸೆ ಹುಸಿಯಾದ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರರು ಚಳುವಳಿಯನ್ನು ತೀವ್ರಗೊಳಿಸುವುದಾಗಿ ಘೋಷಿಸಿದ್ದಾರೆ.
ಮಂಗಳವಾರದಿಂಧ ಸರದಿ ಉಪವಾಸ ಸತ್ಯಾಗ್ರಹ:
ಡಿ.6ರಿಂದ ರೈತರಿಂದ ಸರದಿ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ ಕುರುಬೂರು ಶಾಂತಕುಮಾರ್, ರಾಜ್ಯದ ಕಬ್ಬು ಬೆಳೆಗಾರ ರೈತರು ಬಿಜೆಪಿ ಶಾಸಕರು ಸಂಸದರ ಮನೆ ಅಥವಾ ಕಚೇರಿ ಮುಂದೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಘೋಷಿಸಿದ್ದಾರೆ.
ಕಬ್ಬು ಬೆಳೆಗಾರರ ನಿರಂತರ ಆಹೋ ರಾತ್ರಿ ಹೋರಾಟ ಪೈಕಿ ವಾರಾಂತ್ಯದ ಭಾನುವಾರ ಸಂಘದ ರಾಜ್ಯಾಧ್ಯಕ್ಷರಾದ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ, ಸುರೇಶ್ ಮ ಪಾಟೀಲ್, ಕುಮಾರ್ ಬುಬಾಟಿ, ಮಹಂತೇಶ್ ಸಹಿತ ಅನೇಕ ರೈತ ಮುಖಂಡರು ಬಾಗಿಯಾಗಿದ್ದರು.