ಮಂಗಳೂರು: ವಿಧಾನಸಭಾ ಚುನಾವಣೆಗೆ ಅಖಾಡ ಸಜ್ಜಾಗಿದ್ದು ರಾಜಕೀಯ ಪಕ್ಷಗಳೂ ಭರಾಟೆ ಪ್ರಚಾರದಲ್ಲಿ ತೊಡಗಿವೆ. ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸರು ತಮ್ಮದೇ ಶೈಲಿಯಲ್ಲಿ ಜಾಗೃತಿ ಕೈಗೊಂಡಿದ್ದಾರೆ.
ಶಾಂತಿಯುತ ಚುನಾವಣೆಗೆ ಜಿಲ್ಲಾಡಳಿತ ತಯಾರಿ ನಡೆಸಿದ್ದು, ಕಾನೂನು ಸುವ್ಯವಸ್ಥೆಗೆ ಯಾವುದೇ ರೀತಿ ಅಡ್ಡಿಯಾಗದಂತೆ ಪೊಲೀಸರೂ ಕ್ರಮವಹಿಸಿದ್ದಾರೆ. ಇದೇ ವೇಳೆ, ಭದ್ರತಾ ಕಾರ್ಯಕ್ಕಾಗಿ CRPF ತುಕಡಿಗಳು ಕರಾವಳಿಗೆ ಆಗಮಿಸಿದ್ದು, ಈ ಪೊಲೀಸರು ಶುಕ್ರವಾರ ಸಂಜೆ ಸುಳ್ಯ, ಬೆಳ್ಳಾರೆ ಸಹಿತ ವಿವಿಧ ಠಾಣೆ ವ್ಯಾಪ್ತಿಯ ಪ್ರಮುಖ ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ಪಥ ಸಂಚಲನ ನಡೆಸಿದರು.
ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ತಾಲೂಕುಗಳ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿನ ಸೂಕ್ಷ್ಮ ಪ್ರದೇಶಗಳಲ್ಲಿ CRPF ಜೊತೆ ಮತ್ತು ಸ್ಥಳೀಯ ಪೊಲೀಸರೂ ಪಥ ಸಂಚಲನ ಮಾಡಿದರು.
https://twitter.com/compolmlr/status/1644343615114838017?t=JloAANcBvvaPEP5wMS5Gtg&s=19
ಇದೇ ವೇಳೆ, ಮಂಗಳೂರು ನಗರ ಪೊಲೀಸರೂ ಪಥಸಂಚಲನ ನಡೆಸಿ, ಸಾರ್ವಜನಿಕರಲ್ಲಿ ಶಾಂತಿಯುತ ಚುನಾವಣೆ ನಡೆಯುವ ಕುರಿತು ಆತ್ಮ ವಿಶ್ವಾಸ ಮೂಡಿಸಿದ ಪೊಲೀಸರ ವೈಖರಿ ಗಮನಸೆಳೆಯಿತು.