ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ದಕ್ಷಿಣ ಭಾರತದ ಖ್ಯಾತ ನಟಿ ಚಿತ್ರಾ ವಿಧಿವಶರಾಗಿದ್ದಾರೆ. ತಮಿಳುಹಾಗೂ ತೆಲುಗು ಸಿನಿಮಾಗಳ ಮೂಲಕ ಖ್ಯಾತ ನಟಿ ಎನಿಸಿರುವ ಚಿತ್ರಾ (56) ಇಂದು ಹೃದಯಾಘಾತದಿಂದ ಇಂದು ಮೃತಪಟ್ಟಿದ್ದಾರೆ.
ಕಮಲ್ ಹಾಸನ್ ಅಭಿನಯದ ‘ಅಪೂರ್ವ ರಾಗಂಗಳ್’ ಚಿತ್ರದ ಮೂಲಕ ಬಾಲ್ಯ ನಟಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿರುವ ಇವರು ವಿವಿಧ ಭಾಷೆಗಳ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. . ತಮಿಳು ಭಾಷೆಯ ಹಲವು ಧಾರಾವಾಹಿಗಳಲ್ಲೂ ಚಿತ್ರಾ ಅವರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ನಲ್ಲೆನೈ ಚಿತ್ರಾ ಎಂದೇ ಗುರುತಾಗಿರುವ ಚಿತ್ರಾ ಅವರು 1990ರಲ್ಲಿ ವಿಜಯ್ ರಾಘವನ್ ಜೊತೆ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಂತರ ಸಿನಿಮಾಗಳಿಂದ ದೂರು ಉಳಿದಿದ್ದರು.